ನವದೆಹಲಿ: ಇಂಧನ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪಕ್ಷ ಕರೆ ನೀಡಿದ್ದ ಭಾರತ್ ಬಂದ್ ವೇಳೆಮಗುವೊಂದಕ್ಕೆ ಸರಿಯಾದ ಸಮಯದಲ್ಲಿ ಆಂಬುಲೆನ್ಸ್ ವ್ಯವಸ್ಥೆ ಸಿಗದೆ ಮೃತಪಟ್ಟಿದೆ ಎಂಬ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ ನಡೆದ ಘಟನೆಗೂ. ಪ್ರಕಟವಾದ ವಿಡಿಯೊಗೂ ಯಾವುದೇ ಸಂಬಂಧವಿಲ್ಲ!
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ವಿಡಿಯೊದಲ್ಲಿಮೃತ ಮಗುವನ್ನು ಕೈಯಲ್ಲಿ ಹಿಡಿದುಕೊಂಡು ತಂದೆ ಆಕ್ರೋಶ ವ್ಯಕ್ತಪಡಿಸುತ್ತಿರುವ ದೃಶ್ಯವಿದೆ. ಭಾರತ್ ಬಂದ್ ಕಾರಣದಿಂದ ಸರಿಯಾದ ಸಮಯಕ್ಕೆ ಆಂಬುಲೆನ್ಸ್ ದೊರಕದೇ ಮಗು ಮೃತಪಟ್ಟಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಫಾಲೋ ಮಾಡುವ ಮಾಡಿಫೈಡ್ ರೇಣು (@Renu_18)ಎಂಬುವರು ಈ ವಿಡಿಯೊವನ್ನು ಟ್ವೀಟ್ ಮಾಡಿದ್ದರು. ಇದು 230 ಬಾರಿ ರೀಟ್ವೀಟ್ ಆಗಿತ್ತು.
ಭಾರತ್ ಬಂದ್ ವಿರೋಧಿಸುವವರು ಮತ್ತು ಬಿಜೆಪಿಯನ್ನು ಬೆಂಬಲಿಸುವವರುಈ ವಿಡಿಯೊವನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಬಂದ್ ವಿರುದ್ಧ ಹರಿಹಾಯ್ದಿದ್ದರು. ಘಟನೆ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಂದ್ ವಿರುದ್ಧ ಟೀಕೆಗಳು ವ್ಯಕ್ತವಾಗಿದ್ದವು.
ಭಾರತ್ ಬಂದ್‌ಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ವಿಡಿಯೊಗೊ ಸಂಬಂಧ ಇಲ್ಲ
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ವಿಡಿಯೊಗೂ ಮತ್ತು ಭಾರತ್ ಬಂದ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ.
ಸೆಪ್ಟೆಂಬರ್ 7 ರಂದು, ಮೃತ ಮಗುವನ್ನು ಕೈಯಲ್ಲಿ ಹಿಡಿದುಕೊಂಡು ತಂದೆಯೊಬ್ಬರು ರೋಧಿಸುತ್ತಿರುವ ಘಟನೆ ನಡೆದಿದೆ. ಆದರೆ ಭಾರತ್ ಬಂದ್ ಆಗಿರುವುದು ಸೆಪ್ಟೆಂಬರ್ 10ರಂದು. ಬಿಹಾರದ ಸೀತಾಮರಾಹಿಯಲ್ಲಿ ಈ ಘಟನೆ ನಡೆದಿದೆ ಎಂದು ಲಲ್ಲಾನ್‌ಟಾಪ್ ಸುದ್ದಿ ತಾಣ ವರದಿ ಮಾಡಿದೆ. ನಾಲ್ಕು ವರ್ಷದ ಮಗು ಸಿಮ್ರಾನ್ ಹಾವು ಕಡಿದು ಮೃತಪಟ್ಟಿತ್ತು. ವಾಹನ ಸೌಕರ್ಯವಿಲ್ಲದೆಸಕಾಲಕ್ಕೆ ಆಸ್ಪತ್ರೆಗೆ ಹೋಗಲು ತಡವಾಗಿದ್ದಕ್ಕೆ ಮಗು ಸಾವನ್ನಪ್ಪಿತು. ಈ ವೇಳೆ ಮಗುವಿನ ತಂದೆ ರೋಧಿಸಿದ್ದರು. ಈ ಘಟನೆಯನ್ನು ವಿಡಿಯೊ ಮಾಡಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದರು.
ಸೀತಾಮರಾಹಿಯಲ್ಲಿ ಆ್ಯಂಬುಲೆನ್ಸ್ ಚಾಲಕ ಇಲ್ಲದಿರುವುದರಿಂದ ಹೆಚ್ಚಿನ ಚಿಕಿತ್ಸೆಗೆ ಸದಾರ್ ಆಸ್ಪತ್ರೆಗೆ ತೆಗೆದುಕೊಂಡ ಹೋಗಲು ಸಾಧ್ಯವಾಗಿರಲಿಲ್ಲ. ಕೊನೆಗಳಿಗೆಯಲ್ಲಿ ಸಿಮ್ರಾನ್ ಕುಟುಂಬದವರು ಟೆಂಪೋ ಮಾಡಿಕೊಂಡು ಸದಾರ್ ಆಸ್ಪತ್ರೆಗೆ ಹೋದರೂ ಯಾವುದೇ ಪ್ರಯೋಜನವಾಗಲಿಲ್ಲ. ಮಗು ಮಾರ್ಗ ಮಧ್ಯದಲ್ಲೇ ಮೃತಪಟ್ಟಿತ್ತು.
ತೌಫಿಕ್ ಸಿದ್ದಿಕಿ ಎಂಬುವರ ಫೇಸ್‌ಬುಕ್‌ನಲ್ಲಿಈ ವಿಡಿಯೊವನ್ನು ಸೆಪ್ಟೆಂಬರ್ 9ರಂದು ಅಪ್‌ಲೋಡ್ ಮಾಡಿದ್ದರು. ಇದನ್ನು ಆಲ್ಟ್‌ನ್ಯೂಸ್ ಗಮನಿಸಿತ್ತು.
ಭಾರತ್ ಬಂದ್ ವೇಳೆಬಿಹಾರದ ಜೆಹಾನಾಬಾದ್‌ನಲ್ಲಿ ಪ್ರತಿಭಟನೆ ಪರಿಣಾಮ ಆಸ್ಪತ್ರೆಗೆ ತಡವಾಗಿ ಹೋಗಿದ್ದರಿಂದ ಎರಡು ವರ್ಷದ ಮಗು ಮೃತಪಟ್ಟಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಗೆ ಸೀತಾಮರಾಹಿ ವಿಡಿಯೊ ಹಾಕಿ ಕೆಲವರು ಪೋಸ್ಟ್ ಮಾಡಿದ್ದರು. ಆದರೆ ಆ ಘಟನೆಗೂ ವಿಡಿಯೊಗೂ ಯಾವುದೇ ಸಂಬಂಧವಿರಲಿಲ್ಲ.
ಜೆಹಾನಾಬಾದ್‌ನಲ್ಲಿ ಮಗು ಮೃತಪಟ್ಟಿರುವುದಕ್ಕೆ ಪೋಷಕರು ತಡವಾಗಿ ಆಸ್ಪತ್ರೆಗೆ ಕರೆತಂದಿರುವುದೇ ಕಾರಣ ಎನ್ನಲಾಗಿದೆ. ಭಾನುವಾರ (ಸೆಪ್ಟೆಂಬರ್ 9) ರಾತ್ರಿಯೇ ಮಗುವಿನ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು. ಫೋಷಕರು ಸೋಮವಾರ ಬೆಳಗ್ಗೆ ಆಸ್ಪತ್ರೆಗೆ ಕರೆತರುವಾಗ ಮಾರ್ಗ ಮಧ್ಯದಲ್ಲೇ ಮಗು ಮೃತಪಟ್ಟಿತ್ತು ಎಂದುಜೆಹಾನಾಬಾದ್‌ವಿಭಾಗೀಯ ಅಧಿಕಾರಿ ಅಲೋನ್ ರಂಜನ್ ಘೋಷ್ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.