ADVERTISEMENT

ಮಹಾರಾಷ್ಟ್ರ | ಸಲೂನ್‌ ಪುನರಾರಂಭ: ಸಿಬ್ಬಂದಿ ಕೊರತೆ

ಪಿಟಿಐ
Published 28 ಜೂನ್ 2020, 11:51 IST
Last Updated 28 ಜೂನ್ 2020, 11:51 IST
ಮೂರು ತಿಂಗಳ ಬಳಿಕ ಮುಂಬೈನಲ್ಲಿ ಸಲೂನ್‌ಗಳು ಭಾನುವಾರದಿಂದ ಕಾರ್ಯಾರಂಭಿಸಿವೆ
ಮೂರು ತಿಂಗಳ ಬಳಿಕ ಮುಂಬೈನಲ್ಲಿ ಸಲೂನ್‌ಗಳು ಭಾನುವಾರದಿಂದ ಕಾರ್ಯಾರಂಭಿಸಿವೆ   

ಮುಂಬೈ: ನಗರದಲ್ಲಿ ಕೆಲವೆಡೆ ಮೂರು ತಿಂಗಳ ಬಳಿಕ ಸಲೂನ್‌ಗಳು ಕಾರ್ಯಾರಂಭ ಮಾಡಿವೆ.ಕೊರೊನಾ ಸೋಂಕು ಕಾರಣದಿಂದ ಹೇರಲಾಗಿದ್ದ ನಿರ್ಬಂಧ ಸಡಿಲಿಕೆ ಹಿನ್ನೆಲೆಯಲ್ಲಿ ಭಾನುವಾರದಿಂದ ಅವು ಕಾರ್ಯ ಆರಂಭಿಸಿವೆ. ಆದರೆ, ಸಿಬ್ಬಂದಿ ಕೊರತೆಯಿಂದಾಗಿ ಬಹುತೇಕ ಸಲೂನ್‌ಗಳು ತೆರೆದಿರಲಿಲ್ಲ.

ಕಂಟೈನ್‌ಮೆಂಟ್ ಪ್ರದೇಶಗಳಲ್ಲಿ ಇರುವ ಪಾರ್ಲರ್ ಮತ್ತು ಸಲೂನ್‌ಗಳನ್ನು ತೆರೆಯಲು ಅವಕಾಶ ನೀಡಲಾಗಿಲ್ಲ.

ಕೊರೊನಾ ಸೋಂಕು ಕುರಿತ ನಿಯಮಗಳಿಗೆ ಬದ್ಧರಾಗಿದ್ದು, ಗ್ರಾಹಕರನ್ನು ಥರ್ಮಲ್‌ ತಪಾಸಣೆಗೆ ಒಳಪಡಿಸುತ್ತಿದ್ದೇವೆ ಎಂದು ಕೆಲ ಮಾಲೀಕರು ತಿಳಿಸಿದ್ದಾರೆ.

ADVERTISEMENT

ಸೀಮಿತ ಗ್ರಾಹಕರಿಗೆ ಅವಕಾಶ ಕಲ್ಪಿಸಬೇಕು ಮತ್ತು ಗ್ರಾಹಕರು ಮೊದಲೇ ಸಲೂನ್‌ನಲ್ಲಿ ಸಮಯ ನಿಗದಿ ಪಡಿಸಿಕೊಳ್ಳಬೇಕು ಎಂಬ ಷರತ್ತು ವಿಧಿಸಿ ರಾಜ್ಯ ಸರ್ಕಾರ ಸಲೂನ್‌ಗಳಿಗೆ ಭಾನುವಾರದಿಂದ ಕಾರ್ಯಾರಂಭ ಮಾಡಲು ಅನುಮತಿ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.