ಐಜ್ವಾಲ್ : ಐಜ್ವಾಲ್‌ನ ಪಛೂಂಗಾ ವಿಶ್ವವಿದ್ಯಾಲಯ ಕಾಲೇಜಿನ ಪ್ರಾಣಿವಿಜ್ಞಾನ ವಿಭಾಗವು ಇಲಿಗಳ ಹೆಚ್ಚಳ ಮತ್ತು ಅವುಗಳಿಂದ ಬರುವ ರೋಗಗಳ ಬಗ್ಗೆ ಅಧ್ಯಯನ ನಡೆಸುತ್ತಿದೆ.
ಪ್ರೊ. ಲಾಲ್ರಾಮ್ಲಿಯಾನಾ ನೇತೃತ್ವದ ಎರಡು ತಂಡಗಳು ಪೈಕಿ ಒಂದು ತಂಡ, ತೊಂದರೆಗೆ ಒಳಗಾದ ಹಳ್ಳಿಗಳಿಗೆ ಗುರುವಾರ ಭೇಟಿ ನೀಡಿದೆ. ಮತ್ತೊಂದು ತಂಡ ಶುಕ್ರವಾರ ಭೇಟಿ ನೀಡಿದೆ ಎಂದು ಮೂಲಗಳು ತಿಳಿಸಿವೆ.
ತಂಡಗಳು ಇಲಿಗಳ ಜಾತಿಯನ್ನು ಪರೀಕ್ಷಿಸಲಿವೆ ಮತ್ತು ಅವುಗಳಿಂದ ‘ಸ್ಕ್ರಬ್‌ಟೈಫಸ್’ ಕಾಯಿಲೆ ಹರಡುವ ಸಾಮರ್ಥ್ಯವಿದೆಯೇ ಎಂಬುದನ್ನು ಪತ್ತೆಹಚ್ಚಲಿವೆ.
ವಿಶ್ವವಿದ್ಯಾಲಯದ ತಜ್ಞರು ಮತ್ತು ಇತರ ದೇಶಗಳ ಸಂಶೋಧಕರ ಸಂಶೋಧನೆಯ ಪ್ರಕಾರ, ಇಲಿಗಳು ಅನೇಕ ರೋಗಗಳನ್ನು ಹರಡಿಸುತ್ತವೆ ಮತ್ತು ಮಿಜೋರಾಂನಲ್ಲಿ ಇಲಿಗಳಿಂದ ಸ್ಕ್ರಬ್‌ಟೈಫಸ್ ಹೆಚ್ಚಾಗಿ ಹರಡುತ್ತಿದೆ ಎಂಬುದು ದೃಢಪಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.