ADVERTISEMENT

ಕರುಣಾನಿಧಿ ಮಗ ಎಂ.ಕೆ ಮುತ್ತು ನಿಧನ

ಪಿಟಿಐ
Published 19 ಜುಲೈ 2025, 15:55 IST
Last Updated 19 ಜುಲೈ 2025, 15:55 IST
<div class="paragraphs"><p>ಎಂ.ಕೆ ಮುತ್ತುಗೆ ನಮನ ಸಲ್ಲಿಸಿದ ಸ್ಟಾಲಿನ್</p></div>

ಎಂ.ಕೆ ಮುತ್ತುಗೆ ನಮನ ಸಲ್ಲಿಸಿದ ಸ್ಟಾಲಿನ್

   

– ಪಿಟಿಐ ಚಿತ್ರ

ಚೆನ್ನೈ: ದಿವಂಗತ ಎಂ. ಕರುಣಾನಿಧಿ ಅವರ ಹಿರಿಯ ಮಗ ನಟ ಎಂ.ಕೆ. ಮುತ್ತು (77) ಅವರು ಶನಿವಾರ ಬೆಳಿಗ್ಗೆ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ. ಕಳೆದ ಎರಡು ದಶಕಗಳಿಂದ ಮುತ್ತು ಅವರು ಅನಾರೋಗ್ಯ ಪೀಡಿತರಾಗಿದ್ದರು.

ADVERTISEMENT

ಕರುಣಾನಿಧಿ ಹಾಗೂ ಪದ್ಮಾವತಿ (ಮೊದಲ ಪತ್ನಿ) ದಂಪತಿಯ ಪುತ್ರರಾದ ಮುತ್ತು ಅವರು ತಮಿಳಿನ ಆರು ಸಿನಿಮಾಗಳಲ್ಲಿ ನಟಿಸಿದ್ದರು. ಕರುಣಾನಿಧಿ ಬಳಿಕ ಮುತ್ತು ಅವರೇ ವಾರಸುದಾರರು ಎನ್ನಲಾಗಿತ್ತು. ಆದರೆ, ಈ ಎರಡೂ ಕ್ಷೇತ್ರದಲ್ಲಿ ಅವರು ಹೆಸರು ಮಾಡಲಿಲ್ಲ.

ಮುತ್ತು ಅವರಿಗೆ ಪತ್ನಿ, ಮಗ ಮತ್ತು ಮಗಳು ಇದ್ದಾರೆ.

ಮುತ್ತು ಅವರು 1970ರಲ್ಲಿ ಮೊದಲ ಬಾರಿಗೆ ನಟಿಸಿದ್ದರು. ಕುಡಿತದ ಚಟಕ್ಕೆ ಒಳಗಾಗಿದ್ದ ಮುತ್ತು ಮತ್ತು ತಂದೆ ಕರುಣಾನಿಧಿ ಅವರ ಸಂಬಂಧ ಅಷ್ಟೇನು ಚೆನ್ನಾಗಿ ಇರಲಿಲ್ಲ. ಇಬ್ಬರು ದೂರವೇ ಆಗಿದ್ದರು. ಆದರೆ, ಮುತ್ತು ಅವರ ಆರೋಗ್ಯ ಹದಗೆಟ್ಟ ಕಾರಣ 2009ರಲ್ಲಿ ತಂದೆ–ಮಗ ಒಂದಾಗಿದ್ದರು.

ಮುತ್ತು ಅವರು ನನಗೆ ತಂದೆಯಿದ್ದಂತೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.