
ಚೆನ್ನೈ: ಗಣರಾಜ್ಯೋತ್ಸವವನ್ನು ಏಕರೂಪ ಭಾರತದಂತಲ್ಲದೇ ಏಕೀಕೃತ ಭಾರತವಾಗಿ ಆಚರಿಸಬೇಕೆಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಭಾರತ ದೇಶದ ಸಂಸ್ಕೃತಿಗಳು ಪರಸ್ಪರ ಶ್ರೀಮಂತಗೊಳಿಸುವ ಮತ್ತು ಭಾಷೆಗಳನ್ನು ಗೌರವಿಸುವಂತೆ ಉಳಿಯಬೇಕು. ಏಕರೂಪದ ಭಾರತವನ್ನಲ್ಲ, ಏಕೀಕೃತ ಭಾರತವನ್ನು ರೂಪಿಸುವ ಮೂಲಕ ಸಂಭ್ರಮಿಸೋಣ ಎಂದು ಕೇಂದ್ರದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
‘ಭಾರತ ದೇಶವು ಹಲವು ಧ್ವನಿ ಹೊಂದಿದೆ. ಅನೇಕ ಗುರುತುಗಳು ಒಗ್ಗೂಡಿ ದೇಶ ನಿರ್ಮಾಣವಾಗಿದೆ. ಪ್ರತಿಯೊಬ್ಬ ಭಾರತೀಯನು ಆತ್ಮವಿಶ್ವಾಸ, ಘನತೆಯಿಂದ ಹಾಗೂ ಸ್ವಾತಂತ್ರ್ಯವಾಗಿ ಬದುಕಲು ಸಾಧ್ಯವಾದಾಗ ಮಾತ್ರ ದೇಶ ಮುಂದುವರಿಯುತ್ತದೆ' ಎಂದು ಸ್ಟಾಲಿನ್ ತಿಳಿಸಿದ್ದಾರೆ.
ನಮ್ಮ ಬಲ ವೈವಿಧ್ಯತೆಯಲ್ಲಿದೆ. ಅದನ್ನು ರಕ್ಷಿಸಿದಾಗ ಮಾತ್ರ ನಮ್ಮ ಉತ್ತಮವಾಗಿರುತ್ತದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.