ಚೆನ್ನೈ: ತಮಿಳುನಾಡನ್ನು ವಿಭಜಿಸುವ ‘ದೆಹಲಿಯ ಕೇಸರಿ ಒಳಸಂಚು’ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಡಿಎಂಕೆ ಅಧ್ಯಕ್ಷ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಂಗಳವಾರ ಕಾರ್ಯಕ್ರಮವೊಂದರಲ್ಲಿ ಹೇಳಿದರು.
ಮುಂಬರುವ 2026ರ ಚುನಾವಣೆಯಲ್ಲಿ ತಮ್ಮನ್ನು ಎದುರಿಸಲು ತಯಾರಿ ನಡೆಸುತ್ತಿರುವ ಎಐಎಡಿಎಂಕೆ – ಬಿಜೆಪಿ ಮೈತ್ರಿಯನ್ನು ಉಲ್ಲೇಖಿಸಿ ಅವರು ಈ ಹೇಳಿಕೆ ನೀಡಿದರು.
ಸ್ಟಾಲಿನ್ ಅವರಿಗೂ ಮೊದಲು ಮಾತನಾಡಿದ ಆಡಳಿತರೂಢ ಮೈತ್ರಿಕೂಟದ ಭಾಗವಾಗಿರುವ ವಿಸಿಕೆ ಮುಖ್ಯಸ್ಥ ತೋಳ್ ತಿರುಮಾವಲನ್, ತಮ್ಮ ಪಕ್ಷವು ಡಿಎಂಕೆ ಜೊತೆಗಿನ ಮೈತ್ರಿಯನ್ನು ಮುಂದುವರೆಸುತ್ತದೆ ಎಂದು ಹೇಳಿದರು. ಜೊತೆಗೆ, ತಮ್ಮ ಪಕ್ಷದ ಕಾರ್ಯಕರ್ತರು ಮೈತ್ರಿಯ ಗೆಲುವಿಗಾಗಿ ಕೆಲಸ ಮಾಡಲಿದ್ದಾರೆ ಎಂದು ಖಚಿತಪಡಿಸಿದರು.
‘ಈ ವೇದಿಕೆಯಲ್ಲಿ ಪೆರಿಯಾರ್ ದಾರಿಯನ್ನು ಅನುಸರಿಸುವ ಡ್ರಾವಿಡ ಚಳವಳಿಯ ನಾಯಕರು, ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ನಾಯಕರು, ಗಾಂಧಿವಾದಿ ನಾಯಕರು ಮತ್ತು ಅಂಬೇಡ್ಕರ್‌ವಾದಿ ನಾಯಕರಿದ್ದಾರೆ. ಇದುವೇ ತಮಿಳುನಾಡು, ಇವರೆಲ್ಲರೂ ಒಂದಾಗಿದ್ದಾರೆ’ ಎಂದು ಹೇಳಿದರು.
ಅವರ ಹೇಳಿಕೆಗೆ ಒಪ್ಪಿಗೆ ಸೂಚಿಸುತ್ತಾ ಮುಖ್ಯಮಂತ್ರಿ ಸ್ಟಾಲಿನ್, ‘ತಮಿಳುನಾಡು ಒಂದಾಗಿರುವವರೆಗೆ ದೆಹಲಿಯ ಯಾವುದೇ ಕೇಸರಿ ಒಳಸಂಚು ಇಲ್ಲಿ ಯಶಸ್ವಿಯಾಗುವುದಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.