ADVERTISEMENT

4 ಸಾವಿರ ಟನ್‌ ಈರುಳ್ಳಿ ಆಮದಿಗೆ ಟೆಂಡರ್

ಪಿಟಿಐ
Published 11 ನವೆಂಬರ್ 2019, 19:42 IST
Last Updated 11 ನವೆಂಬರ್ 2019, 19:42 IST
   

ನವದೆಹಲಿ: ಸರ್ಕಾರಿ ಸ್ವಾಮ್ಯದ ಎಂಎಂಟಿಸಿ ಸಂಸ್ಥೆಯು 4 ಸಾವಿರ ಟನ್‌ ಈರುಳ್ಳಿ ಆಮದಿಗೆ ಟೆಂಡರ್ ಕರೆದಿದೆ.

ದೇಶಿ ಪೂರೈಕೆ ಹೆಚ್ಚಿಸುವ ಮೂಲಕ ಬೆಲೆ ನಿಯಂತ್ರಿಸಲು ಕೇಂದ್ರ ಸರ್ಕಾರ 1 ಲಕ್ಷ ಟನ್‌ ಆಮದು ಮಾಡಿಕೊಳ್ಳಲು ಅನುಮತಿ ನೀಡಿದೆ.

ಎಂಎಂಟಿಸಿಯು ಒಟ್ಟಾರೆ ಎರಡು ಹಂತದಲ್ಲಿ ಟೆಂಡರ್ ಕರೆಯಲಿದ್ದು, ಮೊದಲ ಹಂತದಲ್ಲಿ 4 ಸಾವಿರ ಟನ್‌ಗೆ ಟೆಂಡರ್ ಅಹ್ವಾನಿಸಿದೆ.

ADVERTISEMENT

ದೆಹಲಿಯಲ್ಲಿ ಚಿಲ್ಲರೆ ಮಾರಾಟ ದರ ಪ್ರತಿ ಕೆ.ಜಿಗೆ ₹ 100ರ ಸಮೀಪಕ್ಕೆ ತಲುಪಿದೆ. ಬೆರೆ ಪ್ರದೇಶಗಳಲ್ಲಿ ₹ 60 ರಿಂದ ₹ 80ರಂತೆ ಮಾರಾಟವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.