ADVERTISEMENT

‘ಗುಂಪುಹತ್ಯೆಗೆ ಭೌಗೋಳಿಕ ಗಡಿ ಮಿತಿ ಇಲ್ಲ’

ಗುಂಪುಹಲ್ಲೆ ಪಾಶ್ಚಿಮಾತ್ಯ ಮೂಲದ್ದು ಎಂದಿದ್ದ ಮೋಹನ್ ಭಾಗವತ್‌ ಹೇಳಿಕೆಗೆ ಸಿಪಿಎಂ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2019, 20:15 IST
Last Updated 9 ಅಕ್ಟೋಬರ್ 2019, 20:15 IST
   

ನವದೆಹಲಿ (ಪಿಟಿಐ): ‘ಗುಂಪುಹಲ್ಲೆ–ಹತ್ಯೆ ಎಂಬುದು ಪ್ರಾದೇಶಿಕ ಮತ್ತು ಸಾಂಸ್ಕೃತಿಕ ಪರಿಕಲ್ಪನೆ ಅಲ್ಲ.ಇದು ಪಾಶ್ಚಿಮಾತ್ಯ ಪದ ಎನ್ನುವ ಮೂಲಕ ದೇಶದಲ್ಲಿ ನಡೆದಿರುವ ಗುಂಪುಹತ್ಯೆಗಳನ್ನು ಆರ್‌ಎಸ್‌ಎಸ್ ನಿರಾಕರಿಸುತ್ತಿದೆ’ ಎಂದು ಸಿಪಿಎಂ ಟೀಕಿಸಿದೆ.

‘ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಭಾಷಣವು ಆರ್‌ಎಸ್‌ಎಸ್‌ನ ಧರ್ಮಾಂಧ ಮನೋಭಾವವನ್ನು ಬಹಿರಂಗ ಮಾಡಿದೆ’ ಎಂದುಸಿಪಿಎಂ ತನ್ನ ಮುಖವಾಣಿ ‘ಪೀಪಲ್ಸ್ ಡೆಮಾಕ್ರಸಿ’ಯ ಸಂಪಾದಕೀಯದಲ್ಲಿ ಟೀಕಿಸಿದೆ.

‘ಒಬ್ಬ ವ್ಯಕ್ತಿಯನ್ನು ಗುಂಪೊಂದು ಹೊಡೆದು ಕೊಲ್ಲುವುದನ್ನು ಗುಂಪುಹತ್ಯೆ ಎನ್ನಲಾಗುತ್ತದೆ. ಇದು ಯಾವುದೇ ಸಂಸ್ಕೃತಿಗೆ ಸೇರಿದ್ದು ಅಲ್ಲ. ಆದರೆ ದೇಶದಲ್ಲಿ ಗುಂಪುಹತ್ಯೆಗಳು ನಡೆದೇ ಇಲ್ಲ ಎಂಬಂತೆ ಭಾಗವತ್ ಮಾತನಾಡಿದ್ದಾರೆ. ಗೋರಕ್ಷಕರಿಂದ ಗುಂಪುಹಲ್ಲೆ–ಹತ್ಯೆಗಳಿಗೆ ಧಾರ್ಮಿಕ ಅಲ್ಪಸಂಖ್ಯಾತರು ಬಲಿಯಾಗುತ್ತಿದ್ದಾರೆ
ಎಂಬ ಕನಿಷ್ಠ ಜ್ಞಾನವೂ ಭಾಗವತ್‌ಗೆ ಇಲ್ಲ. ಅಲ್ಪಸಂಖ್ಯಾತರನ್ನು ಅಲ್ಪಸಂಖ್ಯಾತರು ಎಂದು ಕರೆಯುವ ಸೌಜನ್ಯವೂ ಅವರಿಗಿಲ್ಲ’ ಎಂದು ಸಿಪಿಎಂ ಟೀಕಿಸಿದೆ.

ADVERTISEMENT

***

ಗುಂಪುಹಲ್ಲೆಗಳನ್ನು ನಿಯಂತ್ರಿಸಿ ಎಂಬ ಸುಪ್ರೀಂ ಕೋರ್ಟ್‌ನ ನಿರ್ದೇಶನವನ್ನು ಆರ್‌ಎಸ್‌ಎಸ್–ಬಿಜೆಪಿ ಕಡೆಗಣಿಸಿದೆ ಎಂಬುದನ್ನು ಭಾಗವತ್ ಹೇಳಿಕೆ ಸಾಬೀತು ಮಾಡಿದೆ

- ಸಿಪಿಎಂನ ‘ಪೀಪಲ್ಸ್‌ ಡೆಮಾಕ್ರಸಿ’ ಸಂಪಾದಕೀಯ

***

ದಲಿತರನ್ನು ಮತ್ತು ಮುಸ್ಲಿಮ ರನ್ನು ರಸ್ತೆಗಳಲ್ಲಿ ಹೊಡೆದು ಕೊಲ್ಲಲಾಗುತ್ತಿದೆ. ಇವೆಲ್ಲಾ ಗುಂಪುಹತ್ಯೆ ಅಲ್ಲವೇ? ಇವುಗಳ ಹಿಂದೆ ಇರುವವರು ಗೋಡ್ಸೆ ಸಂತಾನಗಳು.

- ಅಸಾದುದ್ದೀನ್ ಒವೈಸಿ, ಎಐಎಂಐಎಂ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.