ADVERTISEMENT

ಹಿಂದೂ ಯುವತಿ ಅಪಹರಣ ಆರೋಪ: ಗುಂಪೊಂದು ಮನೆಗಳಿಗೆ ಬೆಂಕಿ

ಪಿಟಿಐ
Published 15 ಏಪ್ರಿಲ್ 2022, 13:32 IST
Last Updated 15 ಏಪ್ರಿಲ್ 2022, 13:32 IST

ಆಗ್ರಾ(ಉತ್ತರ ಪ್ರದೇಶ)(ಪಿಟಿಐ): ಇಲ್ಲಿನ ರುನಾಕ್ತಾದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಹಿಂದೂ ಯುವತಿಯನ್ನು ಅಪಹರಿಸಿದ್ದಾರೆ ಎಂದು ಆರೋಪಿಸಿ ಗುಂಪೊಂದು ಶುಕ್ರವಾರ ಎರಡು ಮನೆಗಳಿಗೆ ಬೆಂಕಿ ಹಚ್ಚಿದೆ.

ಈ ಸಂಬಂಧ ‘ಧರ್ಮ ಜಾಗರಣ ಸಮನ್ವಯ ಸಂಘದ’ ಎಂಟು ಮಂದಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಯುವತಿ ಸೋಮವಾರ ನಾಪತ್ತೆಯಾಗಿದ್ದು, ಎರಡು ದಿನಗಳ ಬಳಿಕ ಪೊಲೀಸರು ಆಕೆಯನ್ನು ಪತ್ತೆ ಹಚ್ಚಿದ್ದರು. ಯುವತಿಯನ್ನು ಅಪಹರಿಸಿರುವ ಆರೋಪದಲ್ಲಿ ಜಿಮ್‌ ಮಾಲೀಕ ಸಾಜಿದ್ ಎಂಬಾತನನ್ನು ಬಂಧಿಸಬೇಕೆಂದು ಗುಂಪು ಆಗ್ರಹಿಸಿತ್ತು.

ADVERTISEMENT

‘ತಾನು ವಯಸ್ಕಳಾಗಿದ್ದು, ವ್ಯಕ್ತಿಯೊಂದಿಗೆ ಸ್ವಇಚ್ಛೆಯಿಂದ ಹೋಗಿದ್ದೇನೆ’ ಎಂದು ಯುವತಿ ಹೇಳಿಕೆ ನೀಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.