ADVERTISEMENT

ಬಜೆಟ್‌ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

​ಪ್ರಜಾವಾಣಿ ವಾರ್ತೆ
Published 5 ಜುಲೈ 2019, 12:49 IST
Last Updated 5 ಜುಲೈ 2019, 12:49 IST
   

ನವದೆಹಲಿ: ಈ ದೇಶವನ್ನು ಸಮೃದ್ಧಗೊಳಿಸುವ, ಜನರನ್ನು ಸಮರ್ಥರನ್ನಾಗಿ ಮಾಡುವ ಬಜೆಟ್‌ ಇದು. ಬಡವರಿಗೆ ಶಕ್ತಿ ಸಿಕ್ಕರೆ, ಯುವಕರಿಗೆ ಉತ್ತಮ ನಾಳೆಗಳು ದೊರೆಯಲಿವೆ ಎಂದು ಬಜೆಟ್‌ ಕುರಿತು ನರೇಂದ್ರ ಮೋದಿ ಅವರು ಅನಿಸಿಕೆ ಹಂಚಿಕೊಂಡಿದ್ದಾರೆ.

ಆಯವ್ಯಯ ಪತ್ರ ಮಂಡನೆ ನಂತರ ಮಾತನಾಡಿರುವ ಅವರು ‘ಇದು ನಾಗರಿಕ ಸ್ನೇಹಿ ಬಜೆಟ್‌. ಮಧ್ಯಮ ವರ್ಗದ ಜನ ಈ ಬಜೆಟ್‌ನೊಂದಿಗೆ ಅಭಿವೃದ್ಧಿಯತ್ತ ಹೆಜ್ಜೆ ಹಾಕಲಿದ್ದಾರೆ. ದೇಶದ ಪ್ರಗತಿ ಇನ್ನಷ್ಟು ವೇಗದಲ್ಲಿ ಆಗಲಿದೆ. ದೇಶದ ತೆರಿಗೆ ವ್ಯವಸ್ಥೆ ಸರಳಗೊಂಡಿದ್ದರೆ, ಮೂಲಸೌಕರ್ಯ ಆಧುನೀಕರಣಗೊಳ್ಳುತ್ತಿದೆ,’ ಎಂದು ಅವರು ಹೇಳಿದರು.

ನವ ಭಾರತಕ್ಕಾಗಿ ಮಂಡನೆಯಾಗಿರುವ ಈ ಬಜೆಟ್‌ ಕೃಷಿ ಕ್ಷೇತ್ರದ ರೂಪಾಂತರಕ್ಕೆ ನಕ್ಷೆಯಾಗಲಿದೆ. ಇದು ದೇಶದ ಭರವಸೆ ಎಂದೂ ಅವರು ಕೊಂಡಾಡಿದ್ದಾರೆ.

ADVERTISEMENT

ಇನ್ನು ಎನ್‌ಡಿಎ–2ನ ಮೊದಲ ಬಜೆಟ್‌ ಬಗ್ಗೆ ಗೃಹ ಸಚಿವ ಅಮಿತ್‌ ಶಾ ಅವರೂ ಮಾತನಾಡಿದ್ದಾರೆ. ನವಭಾರತಕ್ಕಾಗಿ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ ಈ ಬಜೆಟ್‌ ಎಲ್ಲರ ಒಳಗೊಳ್ಳುವಿಕೆಗೆ ಮತ್ತು ಪ್ರಗತಿಗೆ ಅಡಿಗಲ್ಲು ಹಾಕಲಿದೆ. ಭಾರತದ ಕೃಷಿಕರು, ಯುವಕರು, ಮಹಿಳೆಯರು, ಬಡವರ ಅಗತ್ಯಗಳನ್ನು ಪೂರೈಸಲು ಇದು ಪೂರಕವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.