ADVERTISEMENT

ಮೋದಿ ಜನ್ಮದಿನ: ನಿರುದ್ಯೋಗ ದಿನ ಆಚರಿಸಿದ ಯುವ ಕಾಂಗ್ರೆಸ್

ಪಿಟಿಐ
Published 17 ಸೆಪ್ಟೆಂಬರ್ 2025, 18:07 IST
Last Updated 17 ಸೆಪ್ಟೆಂಬರ್ 2025, 18:07 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ಪಿಟಿಐ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ಯುವ ಕಾಂಗ್ರೆಸ್ ಕಾರ್ಯಕರ್ತರು ರಾಷ್ಟ್ರೀಯ ನಿರುದ್ಯೋಗ ದಿನವನ್ನಾಗಿ ಬುಧವಾರ ಆಚರಿಸಿದರು.

ADVERTISEMENT

 ನಿರುದ್ಯೋಗವು ಕಳೆದ ಐದು ದಶಕಗಳಲ್ಲೇ ಗರಿಷ್ಠ ಮಟ್ಟದಲ್ಲಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಯುವ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನು ಚಿಬ್, ‘ಮತಗಳ್ಳತನದ ಮೂಲಕ ಮೋದಿ ಪ್ರಧಾನಿಯಾಗಿರುವ ಕಾರಣಕ್ಕೆ, ಇಂದು ನಿರುದ್ಯೋಗ ಕಳೆದ 50 ವರ್ಷಗಳಲ್ಲೆ ಗರಿಷ್ಠ ಮಟ್ಟದಲ್ಲಿದೆ ಎಂದು ಹೇಳಿದರು.

ಇದು ದೇಶದ ಯುವಜನರ ಧ್ವನಿಯಾಗಿದ್ದು, ಯುವಜನರಿಗೆ ಉದ್ಯೋಗ ಲಭಿಸುವವರೆಗೆ ನಾವು ಮೌನವಾಗುವುದಿಲ್ಲ ಎಂದು ಅವರು ಹೇಳಿದರು.

ಇಲ್ಲಿನ ಪಕ್ಷದ ಕಚೇರಿಯಲ್ಲಿ ಚಹಾ ಮತ್ತು ಪಕೋಡ ಮಳಿಗೆ ತೆರೆದ ಕಾಂಗ್ರೆಸ್ ಕಾರ್ಯಕರ್ತರು, ಅದನ್ನು ಕಪ್ಪು ಬಲೂನುಗಳ ಮೂಲಕ ಅಲಂಕರಿಸಿದರು. ವಿದ್ಯಾವಂತ ಯುವಕರು ನಿರುದ್ಯೋಗದ ಕಾರಣಕ್ಕಾಗಿ ಅರ್ಹ ಉದ್ಯೋಗ ಪಡೆಯುತ್ತಿಲ್ಲ ಎಂದು ಅವರು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.