ADVERTISEMENT

ಎಲ್ಲರಿಗೂ ಕೋವಿಡ್ ಲಸಿಕೆ, ಔಷಧಿ: ಆಸ್ಟ್ರೇಲಿಯಾದ ಪ್ರಧಾನಿ ಜತೆ ಮೋದಿ ಮಾತುಕತೆ

ಪಿಟಿಐ
Published 7 ಮೇ 2021, 12:38 IST
Last Updated 7 ಮೇ 2021, 12:38 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ಕೋವಿಡ್–19 ಲಸಿಕೆಗಳು ಮತ್ತು ಔಷಧಿಗಳ ಕೈಗೆಟುಕುವ ಬೆಲೆ ಮತ್ತು ಸಮಾನ ಹಂಚಿಕೆಯನ್ನು ಖಾತರಿಪಡಿಸುವ ಮಹತ್ವದ ಕ್ರಮಕ್ಕೆ ಭಾರತ ಮತ್ತು ಆಸ್ಟ್ರೇಲಿಯಾದ ಪ್ರಧಾನಿಗಳು ಒಪ್ಪಿಗೆ ಸೂಚಿಸಿದ್ದಾರೆ.

ಈ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಸಂಭವನೀಯ ಕ್ರಮದ ಕುರಿತು ಶುಕ್ರವಾರ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಅವರೊಂದಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ದೂರವಾಣಿಯಲ್ಲಿ ಮಾತುಕತೆ ನಡೆಸಿದರು.

ಇಂಡೋ ಫೆಸಿಫಿಕ್ ಪ್ರಾಂತ್ಯವನ್ನೊಳಗೊಂಡ ಪ್ರದೇಶದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾವು ನಿಯಮಾಧಾರಿತ ಅಂತರರಾಷ್ಟ್ರೀಯ ಆದೇಶ ಮತ್ತು ಮುಕ್ತ ಹಾಗೂ ಅಂತರ್ಗತವಾಗಿ ಒಟ್ಟಾಗಿ ಕಾರ್ಯನಿರ್ವಹಿಸುವ ಮಹತ್ವವನ್ನು ಪ್ರತಿಪಾದಿಸಿದವು.

ADVERTISEMENT

ಕೋವಿಡ್ ಎರಡನೇ ಅಲೆಯಲ್ಲಿ ನಲಗುತ್ತಿರುವ ಭಾರತಕ್ಕೆ ಬೆಂಬಲ ವಿಸ್ತರಿಸಿದ್ದಕ್ಕಾಗಿ ಆಸ್ಟ್ರೇಲಿಯಾವನ್ನು ಶ್ಲಾಘಿಸಿದರು ಎಂದು ಪ್ರಧಾನಿ ಕಚೇರಿಯ ಪ್ರಕಟಣೆಯು ತಿಳಿಸಿದೆ.

‘ಲಸಿಕೆ ಮತ್ತು ಔಷಧಿಗಳು ಕೈಗೆಟುಕುವ ದರ ಮತ್ತು ಸಮಾನ ಲಭ್ಯತೆಯನ್ನು ಖಾತರಿಪಡಿಸುವ ಮಹತ್ವವನ್ನು ನಾವು ಒಪ್ಪಿಕೊಂಡಿದ್ದು, ಈ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಮುಂದಿನ ಉಪಕ್ರಮಗಳ ಬಗ್ಗೆಯೂ ಚರ್ಚಿಸಿದ್ದೇವೆ’ ಎಂದು ಮೋದಿ ಅವರು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.