ADVERTISEMENT

‌ಟ್ರಂಪ್‌ ದಂಪತಿ ಕೋವಿಡ್‌ನಿಂದ ಬೇಗ ಗುಣಮುಖರಾಗಲಿ: ನರೇಂದ್ರ ಮೋದಿ

ಪಿಟಿಐ
Published 2 ಅಕ್ಟೋಬರ್ 2020, 7:56 IST
Last Updated 2 ಅಕ್ಟೋಬರ್ 2020, 7:56 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ:ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮತ್ತು ಅವರ ಪತ್ನಿಗೆ ಕೋವಿಡ್‌–19 ಇರುವುದುಗುರುವಾರ ರಾತ್ರಿ ದೃಢಪಟ್ಟಿದೆ. ಈ ಸಂಬಂಧ ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ, ಇಬ್ಬರೂ ಆದಷ್ಟು ಬೇಗ ಗುಣಮುಖರಾಗಲಿ ಎಂದು ಶುಕ್ರವಾರ ಹಾರೈಸಿದರು.

‘ನನ್ನ ಸ್ನೇಹಿತ ಡೊನಾಲ್ಡ್‌ ಟ್ರಂಪ್,‌ ನಿಮ್ಮ ಆರೋಗ್ಯದಲ್ಲಿ ಆದಷ್ಟು ಬೇಗ ಚೇತರಿಕೆ ಕಾಣಲಿ. ನೀವು ಆರೋಗ್ಯವಂತರಾಗಿರಿ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT