ADVERTISEMENT

ಭಿನ್ನಮತ ಮೀರಿ ಸಹಕಾರದ ಹೊಸ ಶಕೆ

ಪಿಟಿಐ
Published 12 ಅಕ್ಟೋಬರ್ 2019, 20:39 IST
Last Updated 12 ಅಕ್ಟೋಬರ್ 2019, 20:39 IST
ಮೋದಿ ಮತ್ತು ಜಿನ್‌ಪಿಂಗ್‌ ಅವರು ಅನೌಪಚಾರಿಕ ಶೃಂಗಸಭೆ ಸಂದರ್ಭದಲ್ಲಿ ಉಡುಗೊರೆ ವಿನಿಮಯ ಮಾಡಿಕೊಂಡರು
ಮೋದಿ ಮತ್ತು ಜಿನ್‌ಪಿಂಗ್‌ ಅವರು ಅನೌಪಚಾರಿಕ ಶೃಂಗಸಭೆ ಸಂದರ್ಭದಲ್ಲಿ ಉಡುಗೊರೆ ವಿನಿಮಯ ಮಾಡಿಕೊಂಡರು   

ಮಾಮಲ್ಲಪುರಂ: ಭಾರತ–ಚೀನಾ ನಡುವಣ ಭಿನ್ನಾಭಿಪ್ರಾಯಗಳನ್ನು ಚಾತುರ್ಯದಿಂದ ನಿಭಾಯಿಸಿ, ಎರಡೂ ದೇಶಗಳ ನಡುವೆ ಸಹಕಾರದ ಹೊಸ ಶಕೆ ಆರಂಭಿಸಲು ಸಮ್ಮತಿಸಲಾಗಿದೆ. ವ್ಯಾಪಾರ– ಹೂಡಿಕೆಗೆ ಉತ್ತೇಜನ ನೀಡಲು ಸಚಿವ ಮಟ್ಟದ ವ್ಯವಸ್ಥೆ ರೂಪಿಸುವುದು ಮತ್ತು ರಕ್ಷಣಾ ಕ್ಷೇತ್ರದಲ್ಲಿ ಸಹಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರು ಮಾಮಲ್ಲಪುರಂನಲ್ಲಿ ನಡೆದ ಎರಡನೇ ಅನೌಪಚಾರಿಕ ಶೃಂಗಸಭೆಯಲ್ಲಿ ಒಪ್ಪಿದ್ದಾರೆ.

ದ್ವಿಪಕ್ಷೀಯ ವ್ಯಾಪಾರದಲ್ಲಿ ಭಾರತದ ವ್ಯಾಪಾರ ಕೊರತೆ ಹೆಚ್ಚುತ್ತಲೇ ಇದೆ. ಇದನ್ನು ನಿಭಾಯಿಸಲು ಸಹಕಾರ ನೀಡುವ ಭರವಸೆಯನ್ನು ಚೀನಾ ನೀಡಿದೆ. ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್‌ಸಿಪಿಪಿ) ಪ್ರಸ್ತಾವದ ಬಗ್ಗೆ ಚರ್ಚೆ ಮುಂದುವರಿಸಲು ನಿರ್ಧರಿಸಲಾಗಿದೆ. ಇದು ಭಾರತದ ಮಟ್ಟಿಗೆ ಅನೌಪಚಾರಿಕ ಶೃಂಗಸಭೆಯ ಮಹತ್ವದ ಸಾಧನೆ.

‘ನಮ್ಮ ನಡುವಣ ಭಿನ್ನಮತಗಳನ್ನು ಬುದ್ಧಿವಂತಿಕೆಯಿಂದ ನಿಭಾಯಿಸಲು, ಅವು ವಿವಾದಗಳಾಗದಂತೆ ನೋಡಿಕೊಳ್ಳಲು ನಿರ್ಧರಿಸಿದ್ದೇವೆ. ಪರಸ್ಪರರ ಕಾಳಜಿಗಳ ಬಗ್ಗೆ ಸಂವೇದನೆ ಬೆಳೆಸಿಕೊಳ್ಳಲು ನಿರ್ಣಯಿಸಿದ್ದೇವೆ. ಇದು ನಮ್ಮ ದೊಡ್ಡ ಸಾಧನೆ ಮತ್ತು ಭವಿಷ್ಯದಲ್ಲಿ ಇನ್ನಷ್ಟು ಕೆಲಸ ಮಾಡಲು ಸ್ಫೂರ್ತಿ’ ಎಂದು ಮೋದಿ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.