ADVERTISEMENT

ಶಾಂತಿ ಬೋಧಿಸುವ ಧರ್ಮ ಎನ್ನಲಾಗುವ ಇಸ್ಲಾಂನಲ್ಲಿ ಶಾಂತಿ ಕಾಣುತ್ತಿಲ್ಲ: ಭಾಗವತ್

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 15:30 IST
Last Updated 8 ಫೆಬ್ರುವರಿ 2026, 15:30 IST
ಮೋಹನ್‌ ಭಾಗವತ್‌
ಮೋಹನ್‌ ಭಾಗವತ್‌   

ಮುಂಬೈ: ಇಸ್ಲಾಂ ಅನ್ನು ಶಾಂತಿ ಬೋಧಿಸುವ ಧರ್ಮ ಎನ್ನಲಾಗುತ್ತಿದೆ. ಆದರೆ ಶಾಂತಿ ಕಂಡುಬರುತ್ತಿಲ್ಲ. ಆಧ್ಯಾತ್ಮಿಕತೆ ಇಲ್ಲದ ಧರ್ಮವು ಆಕ್ರಮಣಕಾರಿಯಾಗುತ್ತದೆ ಹಾಗೂ ಪ್ರಾಬಲ್ಯ ಸಾಧಿಸಲು ಮುಂದಾಗುತ್ತದೆ ಎಂದು ಮೋಹನ್‌ ಭಾಗವತ್‌ ಹೇಳಿದರು.

ಕ್ರೈಸ್ತ ಹಾಗೂ ಇಸ್ಲಾಂ ಧರ್ಮಗಳು ಏಸು ಕ್ರಿಸ್ತ ಮತ್ತು ಪ್ರವಾದಿ ಮೊಹಮ್ಮದ್ ಅವರ ಬೋಧನೆಗಳಂತೆ ಈಗ ಇಲ್ಲ. ನೈಜ ಇಸ್ಲಾಂ ಮತ್ತು ಕ್ರೈಸ್ತ ಧರ್ಮ ಪಾಲನೆ ಅಗತ್ಯ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಸಾಕಷ್ಟು ವಿರೋಧದ ನಡುವೆಯೂ ಸಂಘದ ಸ್ವಯಂ ಸೇವಕರು ಮುಸ್ಲಿಂ ಸಮುದಾಯದೊಂದಿಗೆ ಕೆಲಸ ಮಾಡುತ್ತಿದ್ದಾರಲ್ಲ’ ಎಂಬ ಮತ್ತೊಂದು ಪ್ರಶ್ನೆಗೆ ‘ಎರಡೂ ಕಡೆಯವರೂ ವಿರೋಧ ಮಾಡುತ್ತಲೇ ಇದ್ದರೆ ಕೇವಲ ಸಂಘರ್ಷವೇ ಇರುತ್ತದೆ. ನಾವು ಏನನ್ನೂ ಸಾಧಿಸಲು ಸಾಧ್ಯ ಇಲ್ಲ’ ಎಂದು ಪ್ರತಿಕ್ರಿಯಸಿದರು.

ADVERTISEMENT

‘ದೇಶದ ಮುಸ್ಲಿಮರು ಹಾಗೂ ಕ್ರೈಸ್ತರೊಂದಿಗೆ ಸ್ನೇಹ ಮಾತುಕತೆ ಹಾಗೂ ನಂಬಿಕೆಯ ಅಗತ್ಯವಿದೆ. ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಎಂಬುದು ಇಲ್ಲ. ನಾವೆಲ್ಲಾ ಒಂದೇ ಸಮಾಜ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.