
ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್
ಕೃಪೆ: ಪಿಟಿಐ
ರಾಂಚಿ: ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರು ‘ವಿವಿಧತೆಯಲ್ಲಿ ಏಕತೆ’ಯ ಮಹತ್ವದ ಕುರಿತು ಶನಿವಾರ ಒತ್ತಿ ಹೇಳಿದರು.
ಬುಡಕಟ್ಟು ಸಮುದಾಯಗಳೊಂದಿಗೆ ಸಂವಾದ ನಡೆಸಿದ ಅವರು, ಧಾರ್ಮಿಕ ಮತಾಂತರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆಸಿದರು.
‘ಭಾರತದ ಸಂಪ್ರದಾಯ ಮತ್ತು ಧರ್ಮ ವಿವಿಧತೆಯಲ್ಲಿ ಏಕತೆಯ ಸಂದೇಶವನ್ನು ಸಾರುತ್ತವೆ. ಹಾದಿಯು ವಿಭಿನ್ನವಾಗಿರಬಹುದು; ಆದರೆ ಗಮ್ಯ ಒಂದೇ. ಎಲ್ಲಾ ಹಾದಿಗಳೂ ಸರಿಯಾದವು, ಯಾವುದೂ ತಪ್ಪಲ್ಲ ಎಂದು ಭಾರತೀಯ ಧರ್ಮ ಹೇಳುತ್ತದೆ. ಇದೇ ಸನಾತನ, ಹಿಂದೂ ಮತ್ತು ಭಾರತೀಯ ಧರ್ಮ ಎಂದು ಹೇಳಿದರು’ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಶಾಸಕ ರಾಮೇಶ್ವರ ಓರಾನ್ ಅವರ ಪುತ್ರಿ ನೀಶಾ ಒರಾನ್ ತಿಳಿಸಿದರು.
ಭಾಗವತ್ ಅವರು ಎರಡು ದಿನ ಜಾರ್ಖಂಡ್ ಪ್ರವಾಸದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.