ADVERTISEMENT

ಮಂಕಿಪಾಕ್ಸ್‌: ರೋಗ ಪತ್ತೆ ಕಾರ್ಯದಲ್ಲಿ ಐಸಿಎಂಆರ್ ಯಶಸ್ವಿ:

ಪಿಟಿಐ
Published 2 ಆಗಸ್ಟ್ 2022, 11:29 IST
Last Updated 2 ಆಗಸ್ಟ್ 2022, 11:29 IST

ನವದೆಹಲಿ (ಪಿಟಿಐ): ‘ಮಂಕಿಪಾಕ್ಸ್‌ ವೈರಾಣುವನ್ನು ಪತ್ತೆಹಚ್ಚುವಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಐಸಿಎಂಆರ್) ಯಶಸ್ವಿಯಾಗಿದೆ. ಲಸಿಕೆ ಹಾಗೂತಪಾಸಣಾ ಕಿಟ್‌ ಅಭಿವೃದ್ಧಿಗಾಗಿ ಸಂಶೋಧನೆ ನಡೆಸಲು ವಿವಿಧ ಸಂಶೋಧನಾ ಸಂಸ್ಥೆಗಳು, ಲಸಿಕೆ ಹಾಗೂ ತಪಾಸಣಾ ಕಿಟ್‌ನ ಭಾರತದ ತಯಾರಕರಿಗೆಐಸಿಎಂಆರ್ ಆಹ್ವಾನ ನೀಡಿದೆ’ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ ಮಂಗಳವಾರ ಹೇಳಿದ್ದಾರೆ.

‘ಭಾರತದಲ್ಲಿ ಈವರೆಗೆ ಎಂಟು ಮಂಕಿಪಾಕ್ಸ್‌ ಪ್ರಕರಣಗಳ ವರದಿಯಾಗಿವೆ. ರೋಗತಡೆಗೆ ಕಾರ್ಯಪಡೆಯನ್ನೂ ರಚಿಸಲಾಗಿದೆ’ ಎಂದು ರೋಗ ತಡೆಗೆ ಸರ್ಕಾರ ಕೈಗೊಂಡ ಕಾರ್ಯಗಳ ಕುರಿತು ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಕೇಳಿದ ಪ್ರಶ್ನೆಗೆ ಸಚಿವಮಾನ್‌ಸುಖ್‌ ಉತ್ತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT