ADVERTISEMENT

ದೇಶದಾದ್ಯಂತ ಎರಡು ವಾರಗಳ ಮುನ್ನವೇ ವ್ಯಾಪಿಸಿರುವ ಮುಂಗಾರು‌: ಐಎಂಡಿ

ಪಿಟಿಐ
Published 26 ಜೂನ್ 2020, 12:08 IST
Last Updated 26 ಜೂನ್ 2020, 12:08 IST
ಮುಂಗಾರು ಮಳೆಯಲ್ಲಿ ಕೊಡೆಯನ್ನು ಹಿಡಿದು ನಡೆಯುತ್ತಿರುವ ಮಹಿಳೆಯರು–ಸಾಂದರ್ಭಿಕ ಚಿತ್ರ
ಮುಂಗಾರು ಮಳೆಯಲ್ಲಿ ಕೊಡೆಯನ್ನು ಹಿಡಿದು ನಡೆಯುತ್ತಿರುವ ಮಹಿಳೆಯರು–ಸಾಂದರ್ಭಿಕ ಚಿತ್ರ   

ನವದೆಹಲಿ: ನಿಗದಿಪಡಿಸಿದ ದಿನಕ್ಕಿಂತ ಎರಡು ವಾರಗಳ ಮುನ್ನವೇ ನೈರುತ್ಯ ಮುಂಗಾರು ಇಡೀ ದೇಶದಾದ್ಯಂತ ವ್ಯಾಪಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ತಿಳಿಸಿದೆ.

ರಾಜಸ್ಥಾನ, ಹರಿಯಾಣ, ಪಂಜಾಬ್‌ಗೂ ಶುಕ್ರವಾರದ ವೇಳೆಗೆ ನೈರುತ್ಯ ಮುಂಗಾರು‌ ವ್ಯಾಪಿಸಿದೆ. ಹೀಗಾಗಿ ಇಡೀ ದೇಶದಾದ್ಯಂತ ಮುಂಗಾರು‌ ಆವರಿಸಿಕೊಂಡಂತಾಗಿದೆ ಎಂದು ಅದು ತಿಳಿಸಿದೆ.

ಸಾಮಾನ್ಯವಾಗಿ ಜೂನ್‌ 1ರಂದು ಕೇರಳ ಪ್ರವೇಶಿಸುವ ಮುಂಗಾರು ಪಶ್ಚಿಮ ರಾಜಸ್ಥಾನದ ಶ್ರೀಗಂಗಾನಗರಕ್ಕೆ ತಲುಪಲು 45 ದಿನಗಳನ್ನು ತೆಗೆದುಕೊಳ್ಳುತ್ತದೆ. ಆದರೆ, ಈ ವರ್ಷ, ಒಂದು ವಾರ ಮೊದಲೇ ತಲುಪುವ ನಿರೀಕ್ಷೆ ಇತ್ತು. ಜತೆಗೆ ಇಡೀ ದೇಶದಾದ್ಯಂತ ಜುಲೈ 8ರ ಒಳಗೆಯೇ ವ್ಯಾಪಿಸಲಿದೆ ಎಂದು ನಿರೀಕ್ಷಿಸಲಾಗಿತ್ತು ಎಂದು ಹವಾಮಾನ ಇಲಾಖೆ ವಿವರಿಸಿದೆ.

ADVERTISEMENT

2013ರಲ್ಲಿಯೂ ಜೂನ್‌ 16ಕ್ಕೆ ಮುಂಗಾರು ಇಡೀ ದೇಶದಾದ್ಯಂತ ವ್ಯಾಪಿಸಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.