ಅಹಮದಾಬಾದ್: ಸಾರ್ವಜನಿಕ ಬಳಕೆ ನಿರ್ಬಂಧಿತ ಮೊರ್ಬಿ ತೂಗು ಸೇತುವೆ ನಿರ್ವಹಣೆಯನ್ನು ಟೆಂಡರ್ ಪ್ರಕ್ರಿಯೆ ಅನುಸರಿಸದೇ, ಯಾವುದೇ ಒಡಂಬಡಿಕೆಯನ್ನೂ ಮಾಡಿಕೊಳ್ಳದೆ ಒರೆವಾ ಸಮೂಹದ ಖಾಸಗಿ ಸಂಸ್ಥೆಗೆ ಐದು ವರ್ಷ ಗುತ್ತಿಗೆ ನೀಡಿರುವುದಕ್ಕೆ ಗುಜರಾತ್ ಹೈಕೋರ್ಟ್ ಗುರುವಾರ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಮೊರ್ಬಿ ಪುರಸಭೆ ಆಡಳಿತದ ವಿರುದ್ಧ ಕ್ರಮ ಕೈಗೊಳ್ಳದಿರುವುದಕ್ಕೂ ಸರ್ಕಾರಕ್ಕೆ ಬಿಸಿ ಮುಟ್ಟಿಸಿರುವ ಕೋರ್ಟ್, ಡಿಸೆಂಬರ್ 12ರಂದು ನಡೆಯಲಿರುವ ಮುಂದಿನ ವಿಚಾರಣೆಯೊಳಗೆ ವಿವರಣೆ ನೀಡುವಂತೆ ಆದೇಶ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ನೇತೃತ್ವದ ವಿಭಾಗೀಯ ಪೀಠವು, ಮೃತರ ಜಾತಿವಾರು ಪಟ್ಟಿ ಸಿದ್ಧಪಡಿಸಿರುವುದನ್ನು ಕಟುವಾಗಿ ಪ್ರಶ್ನಿಸಿತು.
ಸೇತುವೆ ಕುಸಿಯಲು ಕಾರಣವೇನೆಂದು ತನಿಖೆ ನಡೆಸಿದ ವಿಶೇಷ ತನಿಖಾ ತಂಡದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆಪೀಠವು ಸೂಚಿಸಿತು.
ಅ.30ರಂದು ಮೊರ್ಬಿ ತೂಗು ಸೇತುವೆ ಕುಸಿದ ದುರಂತದಲ್ಲಿ 135 ಜನರು ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.