ADVERTISEMENT

ಸಂಚಾರಿ ನಿಯಮ ಉಲ್ಲಂಘನೆಗೆ ಭಾರಿ ದಂಡ: ಕೇಂದ್ರ ಪ್ರಸ್ತಾವ

ಮೋಟಾರು ವಾಹನ ತಿದ್ದುಪಡಿ ಮಸೂದೆಗೆ ಕೇಂದ್ರ ಸಂಪುಟ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 20:00 IST
Last Updated 24 ಜೂನ್ 2019, 20:00 IST
   

ನವದೆಹಲಿ: ಮೋಟಾರು ವಾಹನ ತಿದ್ದುಪಡಿ ಮಸೂದೆಗೆ ಕೇಂದ್ರ ಸಂಪುಟ ಸಭೆ ಸೋಮವಾರ ಅನುಮೋದನೆ ನೀಡಿದ್ದು, ಸಂಚಾರಿ ನಿಯಮ ಉಲ್ಲಂಘನೆಗೆ ಭಾರಿ ದಂಡ ವಿಧಿಸುವ ಪ್ರಸ್ತಾವ ಮಾಡಲಾಗಿದೆ.

ಅಪ್ರಾಪ್ತರು ಬೈಕ್ ಚಲಾಯಿಸಿ ಅಪಘಾತ ಮಾಡಿದ್ದು ಸಾಬೀತಾದರೆ, ವಾಹನದ ನೋಂದಣಿ ರದ್ದು ಮಾಡಲಾಗುವುದು. ಹೆಲ್ಮೆಟ್ ಇಲ್ಲದ ಚಾಲನೆಗೆ ದಂಡದ ಜೊತೆಗೆ ಮೂರು ತಿಂಗಳು ಚಾಲನಾ ಪರವಾನಗಿ ರದ್ದು ಮಾಡುವ ಪ್ರಸ್ತಾವವೂ ಇದೆ.

ಲೋಕಸಭೆಯಲ್ಲಿ ಅನುಮೋದನೆ ಪಡೆದಿದ್ದ ಮಸೂದೆಯು ರಾಜ್ಯಸಭೆಯಲ್ಲಿ 2017ರಲ್ಲಿ ಮಂಡನೆಯಾಗಿತ್ತು. ಆದರೆ ಆಯ್ಕೆ ಸಮಿತಿಯ ಪರಿಶೀಲನೆಗೆ ಕಳುಹಿಸಲಾಗಿತ್ತು. ಮರು ಮಂಡನೆಯಾದ ಬಳಿಕ ಚರ್ಚೆಯಾಗದೇ ಬಾಕಿ ಉಳಿದಿತ್ತು. ಈ ವೇಳೆಗೆ 16ನೇ ಲೋಕಸಭೆ ಅವಧಿ ಮುಕ್ತಾಯವಾಗಿತ್ತು. ಈ ಬಾರಿ ರಾಜ್ಯಸಭೆಯಲ್ಲಿ ಮಂಡನೆಯಾದರೂ ಬಹುಮತದ ಕೊರತೆಯಿಂದ ಅನುಮೋದನೆ ಪಡೆಯುವುದು ಕಠಿಣ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.