ADVERTISEMENT

ದೇಶದಲ್ಲಿ 18,691 ಜಲಮೂಲಗಳ ಒತ್ತುವರಿ: ಜಲಶಕ್ತಿ ಸಚಿವಾಲಯ

ಪಿಟಿಐ
Published 14 ಮಾರ್ಚ್ 2022, 12:39 IST
Last Updated 14 ಮಾರ್ಚ್ 2022, 12:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: 22 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಕೈಗೊಳ್ಳಲಾದ ಜಲಮೂಲಗಳ ಗಣತಿಯಲ್ಲಿ ಒಟ್ಟು 9.45 ಲಕ್ಷಜಲಮೂಲಗಳನ್ನು ಗುರುತಿಸಲಾಗಿದ್ದು, 18,691 ಕೆರೆಕಟ್ಟೆಗಳು ಒತ್ತುವರಿಯಾಗಿವೆ ಎಂದುಜಲಶಕ್ತಿ ಸಚಿವಾಲಯ ಹೇಳಿದೆ.

ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜಲಶಕ್ತಿ ಖಾತೆ ರಾಜ್ಯ ಸಚಿವ ಬಿಶ್ವೇಶ್ವರ್ ತುಡು, ಜಲ ಮೂಲಗಳನ್ನು ಗುರುತಿಸಿರುವತತ್ಕಾಲಿಕ ಅಂಕಿ ಅಂಶಗಳನ್ನು ತಿಳಿಸಿದರು. ‘ಮೊದಲ ಬಾರಿಗೆ ದೇಶದಲ್ಲಿರುವ ಜಲಮೂಲಗಳು ಮತ್ತು ಅವುಗಳು ಅತಿ ಆಕ್ರಮಣಕ್ಕೆ ಒಳಗಾಗಿರುವ ಮಾಹಿತಿಯನ್ನು ಗಣತಿ ಮೂಲಕ ಸಂಗ್ರಹಿಸಲಾಗುತ್ತಿದೆ. ಅತಿಹೆಚ್ಚು ಒತ್ತುವರಿ ತಮಿಳುನಾಡಿನಲ್ಲಿ (8,366) ಕಂಡು ಬಂದಿದ್ದು, ಆಂಧ್ರಪ್ರದೇಶದಲ್ಲಿ 3,920 ಹಾಗೂ ತೆಲಂಗಾಣದಲ್ಲಿ 3,032 ಕೆರೆಕಟ್ಟೆಗಳುಒತ್ತುವರಿಯಾಗಿವೆ’ ಎಂದು ಮಾಹಿತಿ ನೀಡಿದ್ದಾರೆ.

ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆ ಮೂಲಕಜಲಮೂಲಗಳನ್ನು ಮರುಪೂರಣ ಮಾಡುವ ಕೆಲಸಗಳು ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.