ADVERTISEMENT

ಬೆಳಗಿನ ಸುದ್ದಿಗಳು: ಪಿಎಫ್‌ ಬಡ್ಡಿದರ ಶೇ 8.65, ಕಲಬುರ್ಗಿ ತಾಪಮಾನ 44.1 ಡಿಗ್ರಿ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2019, 3:35 IST
Last Updated 27 ಏಪ್ರಿಲ್ 2019, 3:35 IST
ಕಲಬುರ್ಗಿಯಲ್ಲಿ ಬಿಸಿಲಿನ ಝಳಕ್ಕೆ ನಲುಗಿದ ಜನರು
ಕಲಬುರ್ಗಿಯಲ್ಲಿ ಬಿಸಿಲಿನ ಝಳಕ್ಕೆ ನಲುಗಿದ ಜನರು   

ಜಗತ್ತಿನಲ್ಲಿ ವಿದ್ಯಮಾನಗಳ ಕುರಿತನಿರಂತರ ಸುದ್ದಿಗಾಗಿ ‘ಪ್ರಜಾವಾಣಿ’ ವೆಬ್‌ಸೈಟ್‌ ವೀಕ್ಷಿಸಿ...ಈ ದಿನದ ಕೆಲವು ಪ್ರಮುಖ ಸುದ್ದಿಗಳ ಸಂಕಲನ ಇದಾಗಿದೆ. ಮೊದಲನೆಯದಾಗಿನಿಮ್ಮ ವಿಶ್ವಾಸಾರ್ಹ ದಿನಪತ್ರಿಕೆ ’ಪ್ರಜಾವಾಣಿ’ಯ ಓದುಗರ ಸಂಖ್ಯೆ 71 ಲಕ್ಷ ದಾಟಿದ್ದು, ಹೊಸ ಓದುಗರನ್ನು ಸೃಷ್ಟಿಸಿಕೊಂಡು ಮುನ್ನುಗ್ಗುತ್ತಿದೆ.

ಪಿ.ಎಫ್‌ ಬಡ್ಡಿದರ ಶೇ 8.65ರಷ್ಟು ನಿಗದಿಗೆ ಹಣಕಾಸು ಇಲಾಖೆ ಅನುಮೋದನೆ,ಆರ್‌ಬಿಐ ವಿರುದ್ಧ ಸುಪ್ರೀಂ ಕೋರ್ಟ್‌ ಆಕ್ರೋಶ, ಶ್ರೀಲಂಕಾದಲ್ಲಿ ಬಿಗಿ ಭದ್ರತೆ ನಡುವೆ ಪ್ರಾರ್ಥನೆ, ಚೆನ್ನೈನಲ್ಲಿ ಮೊದಲ ಸೋಲು ಕಂಡ ಸಿಎಸ್‌ಕೆ, ದೇಶದಲ್ಲಿ ಮೊದಲ ಬಾರಿ ಆಡಳಿತ ಪರ ಅಲೆ ಎಂದ ಮೋದಿ, ಕಲಬುರ್ಗಿಯಲ್ಲಿ 44 ಡಿಗ್ರಿ ಮೀರಿದ ಉಷ್ಣಾಂಶ, ಮೈಸೂರು ದಸರಾದಲ್ಲಿ ಕಾಣಿಸಿಕೊಳ್ಳುತ್ತಿದ್ದ ಆನೆ ’ದ್ರೋಣ’ ಇನ್ನು ನೆನಪು ಮಾತ್ರ,.... ಇವಿಷ್ಟು ನಮ್ಮ ಸುದ್ದಿ ತಾಣದಲ್ಲಿನ ಕೆಲವು ಪ್ರಮುಖ ಸುದ್ದಿಗಳು.ಇವುಗಳನ್ನು ಓದುವುದಕ್ಕಾಗಿ ಈ ಕೆಳಗಿನ ಲಿಂಕ್‌ಗಳನ್ನು ಕ್ಲಿಕ್ಕಿಸಿ.ಇವುಗಳ ಜೊತೆಗೆ ಸಂಪಾದಕೀಯ, ವಿಶ್ಲೇಷಣೆ, ಅಂಕಣಗಳನ್ನು ಓದಲು ಮರೆಯದಿರಿ.

‌ಕನ್ನಡಿಗರ ಅತ್ಯಂತ ವಿಶ್ವಾಸಾರ್ಹ ದಿನಪತ್ರಿಕೆಯಾಗಿರುವ ‘ಪ್ರಜಾವಾಣಿ’ಯ ಓದುಗರ ಬಳಗವು 71.77 ಲಕ್ಷಕ್ಕೆ ಏರಿರುವುದನ್ನು ಓದುಗರ ಸಮೀಕ್ಷೆ (ಇಂಡಿಯನ್‌ ರೀಡರ್‌ಶಿಪ್‌ ಸರ್ವೆ) ದೃಢಪಡಿಸಿದೆ.

ಬ್ಯಾಂಕುಗಳಿಗೆ ಸಾಲ ಬಾಕಿ ಉಳಿಸಿಕೊಂಡಿರುವವರ ಹೆಸರು ಬಹಿರಂಗಪಡಿಸುವುದು ಭಾರತೀಯ ರಿಸರ್ವ್‌ ಬ್ಯಾಂಕಿನ ಕರ್ತವ್ಯ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

2018–19ನೆ ಹಣಕಾಸು ವರ್ಷಕ್ಕೆ ಉದ್ಯೋಗಿಗಳ ಭವಿಷ್ಯ ನಿಧಿಯ (ಪಿಎಫ್‌) ಶೇ 8.65ರಷ್ಟು ಬಡ್ಡಿ ದರಕ್ಕೆ ಕೇಂದ್ರ ಹಣಕಾಸು ಸಚಿವಾಲಯವು ತನ್ನ ಅನುಮೋದನೆ ನೀಡಿದೆ.

ಶ್ರೀಲಂಕಾದಲ್ಲಿ ಸರಣಿ ಸ್ಫೋಟದ ನಂತರದ ಮೊದಲ ಶುಕ್ರವಾರ ಮುಸ್ಲಿಮರು ಆತಂಕದಲ್ಲಿಯೇ ಪ್ರಾರ್ಥನೆ ಸಲ್ಲಿಸಿದರು. ಪ್ರತೀಕಾರದ ದಾಳಿ ಭೀತಿಯಿಂದ ಬಹಳಷ್ಟು ಜನ ಪ್ರಾರ್ಥನೆಗೆ ಹಾಜರಾಗಿರಲಿಲ್ಲ.

ಚೆನ್ನೈ ತಂಡ ಈ ಸಲ ತವರಿನ ಅಂಗಳದಲ್ಲಿ ಸೋತ ಮೊದಲ ಪಂದ್ಯ ಇದು. ಮುಂಬೈ ಇಂಡಿಯನ್ಸ್‌ ತಂಡ 46ರನ್‌ಗಳಿಂದ ಜಯಭೇರಿ ಮೊಳಗಿಸಿದೆ. ಇದರೊಂದಿಗೆ ರೋಹಿತ್‌ ಶರ್ಮಾ ಬಳಗ ಪಾಯಿಂಟ್ಸ್‌ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.

‌ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ದೇಶದ ಜನರು ನಮ್ಮ ಸರ್ಕಾರದ ಪರ ಮಾತನಾಡುತ್ತಿದ್ದಾರೆ. ದೇಶದ ಉದ್ದಗಲಕ್ಕೂ ಚುನಾವಣೆಯ ಸಂಭ್ರಮ ಕಾಣುತ್ತಿದೆ. ಇಲ್ಲಿ ನಾನು ಅಭ್ಯರ್ಥಿಯೇ ಅಲ್ಲ. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನೂ ಅಭ್ಯರ್ಥಿ’ – ನರೇಂದ್ರ ಮೋದಿ.

ಕಲಬುರ್ಗಿ ನಗರದ ಗರಿಷ್ಠ ತಾಪಮಾನ ಶುಕ್ರವಾರ 44.1 ಡಿಗ್ರಿ ಸೆಲ್ಸಿಯಸ್‌ ತಲುಪಿತ್ತು.ಪ್ರಸಕ್ತ ವರ್ಷದಲ್ಲಿ ಈ ವರೆಗೆ ದಾಖಲಾದ ಅತಿ ಹೆಚ್ಚು ತಾಪಮಾನ ಇದಾಗಿದೆ.ಕಳೆದ ವರ್ಷ ಇದೇ ದಿನ 42 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು

ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಮೂರು ವರ್ಷದಿಂದ ರಾಜ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಾ ಲಕ್ಷಾಂತರ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದ 37ರ ವರ್ಷದ ‘ದ್ರೋಣ’ ಇನ್ನಿಲ್ಲ.

ಹಣ ಪಡೆದು ನಾಮಪತ್ರ ಹಿಂದಕ್ಕೆ ಪಡೆದರೇ ಎಸ್.ಪಿ.ಮುದ್ದಹನುಮೇಗೌಡ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ? ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ದೂರವಾಣಿ ಸಂಭಾಷಣೆಯ ಆಡಿಯೊ.

ಅತೃಪ್ತ ಶಾಸಕರು ತಮ್ಮೊಂದಿಗೆ ಕೈ ಜೋಡಿಸಬಹುದೆಂಬ ಕಾಂಗ್ರೆಸ್‌ ಶಾಸಕ ರಮೇಶ ಜಾರಕಿಹೊಳಿಗೆ ನಿರೀಕ್ಷೆ ಹುಸಿಯಾಗಿದೆ. ಯಾವೊಬ್ಬ ಶಾಸಕರೂ ಅವರ ಜೊತೆ ಗುರುತಿಸಿಕೊಳ್ಳದಿರುವುದರಿಂದ ಏಕಾಂಗಿಯಾಗಿದ್ದಾರೆ.

ತಮಿಳುನಾಡಿನ ರಾಮನಾಥಪುರದಲ್ಲಿ 19 ಉಗ್ರರು ಅವಿತುಕೊಂಡಿದ್ದಾರೆ ಎಂದು ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರು ಬರೆದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಬೆಂಗಳೂರು ಸೇರಿದಂತೆ ರಾಜ್ಯದ 7 ಜಿಲ್ಲೆಗಳಲ್ಲಿ ಎಚ್‌1ಎನ್‌1 ಪ್ರಕರಣ ಹೆಚ್ಚಾಗಿದ್ದು, ಕಳೆದ ನಾಲ್ಕು ತಿಂಗಳಲ್ಲಿ ಒಟ್ಟು 39 ಮಂದಿ ಮೃತಪಟ್ಟಿದ್ದಾರೆ.

ಶ್ರೀಲಂಕಾದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ 138 ದಶಲಕ್ಷ ಮಂದಿ ಸಾವಿಗೀಡಾಗಿದ್ದಾರೆ ಎಂದು ಟ್ವೀಟ್ ಮಾಡಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಡವಟ್ಟು ಮಾಡಿಕೊಂಡಿದ್ದಾರೆ.

ಚಿಕ್ಕಮಗಳೂರುಜಿಲ್ಲೆಯ ಕಡೂರು ತಾಲ್ಲೂಕಿನ ಬೀರೂರಿನ ವೀಳ್ಯದೆಲೆ ವ್ಯಾಪಾರಿ ಮಗ ಎಚ್‌.ಸಂತೋಷಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ 753ನೇ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಎರಡನೇ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿದ್ದಾರೆ.

ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಅತಿದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಗೆಲ್ಲುವುದು ನಿರ್ಣಾಯಕ ಎಂಬುದು ಬಹಳ ಹಿಂದಿನಿಂದಲೇ ಚಾಲ್ತಿಯಲ್ಲಿರುವ ನಂಬಿಕೆ. ಈ ಬಾರಿಯೂ ಆ ಲೆಕ್ಕಾಚಾರ ಸರಿಹೋಗುವುದೇ?

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಆಂಧ್ರಪ್ರದೇಶ ಮತ್ತು ತಮಿಳುನಾಡು ಕಡಲ ತೀರದಲ್ಲಿ ಚಂಡಮಾರುತ ಬೀಸಲಿದೆ. ಇದರಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆ ಸಾಧ್ಯತೆ.

ಪಾಕ್‌ನಿಂದಬೆಂಗಳೂರಿಗೆ ಬಂದು ಮದುವೆಯಾಗಿ ಇಲ್ಲೇ ನೆಲೆಸಿ ಜೈಲು ಶಿಕ್ಷೆಗೆ ಗುರಿಯಾಗಿರುವ ದಂಪತಿಯನ್ನು ತಡಮಾಡದೆ ವಾಘಾ ಗಡಿಗೆ ಕರೆದುಕೊಂಡು ಹೋಗಿ, ಆಚೆಗೆ ಕಳಿಸಿ- ಹೈಕೋರ್ಟ್‌ ಖಡಕ್‌ ಸೂಚನೆ.

ದೇಶದ 1,100ಕ್ಕೂ ಹೆಚ್ಚು ಐಎಎಸ್‌ ಅಧಿಕಾರಿಗಳು ಸರ್ಕಾರದ ಪಾಲಿಗೆ ಅಪ್ರಯೋಜಕರು ಎಂಬ ವಿಷಯ ಈಗ ಬಹಿರಂಗಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.