ಮೋತಿಹಾರಿ(ಬಿಹಾರ): ನೇಪಾಳದಲ್ಲಿ ಇತ್ತೀಚೆಗೆ ನಡೆದಿದ್ದ ವ್ಯಾಪಕ ಪ್ರತಿಭಟನೆಗಳ ಸಂದರ್ಭದಲ್ಲಿ ಅಲ್ಲಿನ ಜೈಲುಗಳಿಂದ ಪರಾರಿಯಾಗಿದ್ದ ಐದು ಮಂದಿ ವಿದೇಶಿ ಪ್ರಜೆಗಳನ್ನು ಬಿಹಾರದ ಮೋತಿಹಾರಿ ಬಳಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಬಂಧಿತರ ಪೈಕಿ ನಾಲ್ವರು ಸುಡಾನ್ ಹಾಗೂ ಒಬ್ಬರು ಬೊಲಿವಿಯಾ ಪ್ರಜೆಗಳಾಗಿದ್ದಾರೆ.
‘ಸಶಸ್ತ್ರ ಸೀಮಾ ಬಲ(ಎಸ್‌ಎಸ್‌ಬಿ) ಸಿಬ್ಬಂದಿ ನೀಡಿದ ಮಾಹಿತಿ ಆಧರಿಸಿ, ಮೋತಿಹಾರಿ ಬಳಿಯ ಘೋಡಾಸಹನ್ ಬಸ್ ನಿಲ್ದಾಣದ ಮೇಲೆ ದಾಳಿ ನಡೆಸಿ ಈ ಐದು ಜನರನ್ನು ಬಂಧಿಸಲಾಯಿತು. ಬಂಧಿತರು 30 ವರ್ಷ ವಯೋಮಾನದವರಾಗಿದ್ದಾರೆ’ ಎಂದು ಪೂರ್ವ ಚಂಪಾರಣ್ ಎಸ್‌ಪಿ ಸ್ವರ್ಣ ಪ್ರಭಾತ್ ತಿಳಿಸಿದ್ದಾರೆ.
‘ನೇಪಾಳದ ಸೆಂಟ್ರಲ್ ಜೈಲಿನಿಂದ ಪರಾರಿಯಾಗಿದ್ದಾಗಿ ಬಂಧಿತರ ಪೈಕಿ ಇಬ್ಬರು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ’ ಎಂದೂ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.