ADVERTISEMENT

ಸಂಚಾರ ನಿಯಮ ಉಲ್ಲಂಘನೆ- ಲಾರಿ ಚಾಲಕನಿಗೆ ₹ 86,500 ದಂಡ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2019, 10:42 IST
Last Updated 8 ಸೆಪ್ಟೆಂಬರ್ 2019, 10:42 IST
   

ಒಡಿಶಾ: ಸಂಚಾರ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಸಂಬಾಲಪುರ ಜಿಲ್ಲೆಯ ಲಾರಿ ಚಾಲಕನಿಗೆ ಅಲ್ಲಿನ ಸಾರಿಗೆ ಅಧಿಕಾರಿಗಳು₹ 86,500 ದಂಡ ವಿಧಿಸಿದ್ದಾರೆ.

ಚಾಲಕ ಅಶೋಕ್ ಜಾದವ್ ಎಂಬಾತನಲಾರಿ ಹಿಡಿದ ಅಧಿಕಾರಿಗಳುಹಲವು ನಿಯಮಗಳಉಲ್ಲಂಘನೆಯಾಗಿದೆ ಎಂದು ಆತನಿಗೆದಂಡ ವಿಧಿಸಿದ್ದಾರೆ. ನೂತನ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದ ನಂತರ ಅತ್ಯಧಿಕ ದಂಡ ಪಾವತಿಸಿದ ದೇಶದ ವಾಹನ ಚಾಲಕ ಈತನೇ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಅಧಿಕ ಸರಕು ತುಂಬಿದ ಲಾರಿ ಎಂದು ಮೇಲ್ನೋಟಕ್ಕೆ ಕಂಡುಬಂದಿದ್ದರಿಂದ ಲಾರಿಯನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ ಆಗಸ್ಟ್ ಕೊನೆಯ ವಾರದಲ್ಲಿ ಈ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಸಂಬಾಲಪುರದ ಪ್ರಾದೇಶಿಕ ಸಾರಿಗೆ ಅಧಿಕಾರಿ ಲಲಿತ್ ಮೋಹನ್ ಬೆಹರಾ ಮಾಧ್ಯಮಗಳಿಗೆ ವಿವರ ನೀಡಿ, ಅಶೋಕ್ ಜಾದವ್ ತನ್ನ ಲಾರಿಯನ್ನು ತಾನು ಚಾಲನೆ ಮಾಡದೆ ಅನಧಿಕೃತ ವ್ಯಕ್ತಿಗೆ ನೀಡಿರುವುದಕ್ಕೆ ₹ 5,000, ಲೈಸೆನ್ಸ್ ಇಲ್ಲದೆ ವಾಹನ ಚಾಲನೆ 5000, ನಿಯಮ ಬಾಹಿರವಾಗಿ ಅಧಿಕ ಸರಕು ಸಾಗಣೆ ಎಲ್ಲಾ ಸೇರಿ ₹86,500 ದಂಡ ವಿಧಿಸಿರುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.