ಸಾವು
(ಪ್ರಾತಿನಿಧಿಕ ಚಿತ್ರ)
ಮಾಪುಟೊ: ಮೊಜಾಂಬಿಕ್ ಬೆಯಿರಾ ಕರವಾಳಿಯಲ್ಲಿ ದೋಣಿಯೊಂದು ಮಗುಚಿಬಿದ್ದ ಪರಿಣಾಮ ಮೂವರು ಭಾರತೀಯರು ಮೃತಪಟ್ಟಿದ್ದು, ಒಬ್ಬರು ಗಾಯಗೊಂಡಿದ್ದಾರೆ.
‘ಅಪಾಯದಲ್ಲಿದ್ದ ಐವರು ಭಾರತೀಯರನ್ನು ರಕ್ಷಿಸಲಾಗಿದೆ. ಅಪಘಾತಕ್ಕೊಳಗಾದ ದೋಣಿಯಲ್ಲಿ 14 ಮಂದಿ ಭಾರತೀಯರು ಸೇರಿದಂತೆ ಹಲವರಿದ್ದರು’ ಎಂದು ಭಾರತದ ಹೈಕಮಿಷನ್ ಶನಿವಾರ ಮಾಹಿತಿ ನೀಡಿದೆ.
‘ಮೃತಪಟ್ಟವರ ಕುಟುಂಬಸ್ಥರೊಂದಿಗೆ ಸಂಪರ್ಕದಲ್ಲಿದ್ದೇವೆ. ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಹೈಕಮಿಷನ್ ಹೇಳಿದೆ.
ಅಪಘಾತಕ್ಕೆ ಕಾರಣ ಮತ್ತು ದೋಣಿಯಲ್ಲಿ ಒಟ್ಟು ಎಷ್ಟು ಮಂದಿ ಇದ್ದರು ಎಂಬ ಮಾಹಿತಿ ಲಭ್ಯವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.