ADVERTISEMENT

ಕುಸಿದುಬಿದ್ದ ಸಪ್ತರ್ಷಿ ಮೂರ್ತಿಗಳು: ನ್ಯಾಯಾಂಗ ತನಿಖೆಗೆ ಕಾಂಗ್ರೆಸ್‌ ಪಟ್ಟು

ಪಿಟಿಐ
Published 4 ಜೂನ್ 2023, 11:21 IST
Last Updated 4 ಜೂನ್ 2023, 11:21 IST
ಬಿರುಗಾಳಿಯಿಂದಾಗಿ ಭಗ್ನಗೊಂಡಿರುವ ಮೂರ್ತಿಯೊಂದರ ದೃಶ್ಯ (ಸಂಗ್ರಹ ಚಿತ್ರ)
ಬಿರುಗಾಳಿಯಿಂದಾಗಿ ಭಗ್ನಗೊಂಡಿರುವ ಮೂರ್ತಿಯೊಂದರ ದೃಶ್ಯ (ಸಂಗ್ರಹ ಚಿತ್ರ)   

ಭೋಪಾಲ್‌: ‘ಉಜ್ಜೈನಿಯ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಸಪ್ತರ್ಷಿಗಳ ವಿಗ್ರಹಗಳು ಕುಸಿದುಬಿದ್ದ ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸುವಂತೆ ಮಧ್ಯಪ್ರದೇಶ ಹೈಕೋರ್ಟ್‌ಗೆ ಕಾಂಗ್ರೆಸ್‌ ಮೊರೆಹೋಗಲಿದೆ’ ಎಂದು  ಪಕ್ಷದ ನಾಯಕರೊಬ್ಬರು ಭಾನುವಾರ ತಿಳಿಸಿದರು.

ಮೇ 28ರಂದು ಬಿರುಗಾಳಿಯಿಂದಾಗಿ ಮಹಾಕಾಲ್‌ ಲೋಕ್‌ ಕಾರಿಡಾರ್‌ನಲ್ಲಿದ್ದ ಏಳು ಋಷಿಗಳ ವಿಗ್ರಹಗಳ ಪೈಕಿ ಆರು ವಿಗ್ರಹಗಳು ಕುಸಿದುಬಿದ್ದಿದ್ದವು.

‘ನಾವು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ಸಿದ್ಧವಾಗಿದ್ದೇವೆ. ಅರ್ಜಿಯನ್ನು ಹಿರಿಯ ವಕೀಲರಿಗೂ ಕಳುಹಿಸಿದ್ದೇವೆ. ಬಹುಶಃ ಈ ವಾರದಲ್ಲಿ ಕೋರ್ಟ್‌ಗೆ ಅರ್ಜಿ ಸಲ್ಲಿಸಲಿದ್ದೇವೆ’ ಎಂದು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.