ADVERTISEMENT

ಮಧ್ಯಪ್ರದೇಶದಲ್ಲಿ ‘ಕಿಲ್‌ ಕೊರೊನಾ’: ಮನೆ–ಮನೆಗೆ ತೆರಳಿ ಆರೋಗ್ಯ ಸಮೀಕ್ಷೆ

ಪಿಟಿಐ
Published 28 ಜೂನ್ 2020, 5:56 IST
Last Updated 28 ಜೂನ್ 2020, 5:56 IST
   

ಭೋಪಾಲ್: ಕೊರೊನಾ ಸೋಂಕು ವ್ಯಾಪಿಸುತ್ತಿರುವುದನ್ನು ನಿಯಂತ್ರಿಸಲುಮಧ್ಯಪ್ರದೇಶ ಸರ್ಕಾರವು ಜುಲೈ 1ರಂದು ‘ಕಿಲ್‌ ಕೊರೊನಾ’ ಅಭಿಯಾನಕ್ಕೆ ಚಾಲನೆ ನೀಡಲಿದೆ.

ಈ ಅಭಿಯಾನದಲ್ಲಿ ಮನೆ ಮನೆಗೆ ತೆರಳಿ ಆರೋಗ್ಯ ಸಮೀಕ್ಷೆ ನಡೆಸಲಾಗುತ್ತದೆ. ಈ ವೇಳೆ ಆರೋಗ್ಯ ತಪಾಸಣೆಯೂ ನಡೆಯಲಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರುಶನಿವಾರ ನಡೆಸಿದ ಆನ್‌ಲೈನ್‌ ಸಭೆಯಲ್ಲಿ ತಿಳಿಸಿದ್ದಾರೆ.

15 ದಿನಗಳ ಈ ಅಭಿಯಾನದಲ್ಲಿ 2.5 ಲಕ್ಷ ಪರೀಕ್ಷೆಗಳು ನಡೆಸಲು ಉದ್ದೇಶಿಸಲಾಗಿದೆ, ನಿತ್ಯ 15 ಸಾವಿರದಿಂದ 20 ಸಾವಿರ ಜನರಿಂದ ಮಾದರಿಗಳನ್ನು ಸಂಗ್ರಹಿಸಲಾಗುವುದು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ADVERTISEMENT

‘ಪ್ರಸ್ತುತ ರಾಜ್ಯದಲ್ಲಿ 10 ಲಕ್ಷ ಜನರಲ್ಲಿ 4 ಸಾವಿರ ಜನರನ್ನು ಪರೀಕ್ಷೆಗೊಳಪಡಿಸಲಾಗುತ್ತಿದ್ದು, ಈ ಪರೀಕ್ಷಾ ಸಾಮರ್ಥ್ಯವನ್ನು ದುಪ್ಪಟ್ಟುಗೊಳಿಸಲಾಗುವುದು’ ಎಂದು ಮುಖ್ಯಮಂತ್ರಿ ತಿಳಿಸಿದರು.

ಮಧ್ಯ ಪ್ರದೇಶದಲ್ಲಿ ಕೋವಿಡ್‌ನಿಂದ ಗುಣಮುಖ ಆಗುತ್ತಿರುವವರ ಪ್ರಮಾಣ ಶೇ 76.9 ರಷ್ಟಿದೆ. ಇಲ್ಲಿ ಕೋವಿಡ್‌ಬೆಳವಣಿಗೆಯ ದರ ಶೇ 1.44 ರಷ್ಟಿದೆ. ರಾಷ್ಟ್ರಮಟ್ಟದಲ್ಲಿ ಕೋವಿಡ್‌ನಿಂದ ಗುಣಮುಖರಾಗುತ್ತಿರುವವರ ಪ್ರಮಾಣ ಶೇ 58.1ರಷ್ಟಿದ್ದರೆ, ಕೋವಿಡ್‌ ಬೆಳವಣಿಗೆಯ ದರ ಶೇ 3.69ರಷ್ಟಿದೆ ಎಂದು ಚೌಹಾಣ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.