ADVERTISEMENT

ಮಧ್ಯಪ್ರದೇಶದ ಜಿಲ್ಲಾಧಿಕಾರಿಯ ಕಾಲಿಗೆ ಬಿದ್ದು ಮನವಿ ಮಾಡಿದ ರೈತ

ಏಜೆನ್ಸೀಸ್
Published 31 ಡಿಸೆಂಬರ್ 2018, 15:14 IST
Last Updated 31 ಡಿಸೆಂಬರ್ 2018, 15:14 IST
   

ನವದೆಹಲಿ: ಮಧ್ಯಪ್ರದೇಶದ ಶಿವಪುರಿಜಿಲ್ಲೆಯ ರೈತರೊಬ್ಬರುಜಿಲ್ಲೆಗೆ ನೇಮಕವಾದ ನೂತನ ಜಿಲ್ಲಾಧಿಕಾರಿಕಾರು ಹತ್ತಲು ಮುಂದಾಗುತ್ತಿದ್ದಂತೆ ಅಲ್ಲಿಯೇ ಆಕೆಯ ಪಾದಕ್ಕೆ ನಮಸ್ಕರಿಸಿ ಮನವಿ ಮಾಡಿಕೊಳ್ಳುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಎಎನ್‍ಐ ಸುದ್ದಿಸಂಸ್ಥೆ ಶೇರ್ ಮಾಡಿರುವ ವಿಡಿಯೊದಲ್ಲಿ ರೈತರೊಬ್ಬರು ಕೈಯಲ್ಲಿ ಹಿಡಿಯಷ್ಟು ಬೆಳೆ ಹಿಡಿದುಕೊಂಡು ಮಹಿಳಾ ಜಿಲ್ಲಾಧಿಕಾರಿ ಮುಂದೆ ನಮಸ್ಕರಿಸಿ,ತಮ್ಮ ಗ್ರಾಮದಲ್ಲಿ ಹೊಸ ಟ್ರಾನ್ಸ್‌ಫಾರ್ಮರ್‌ ಸ್ಥಾಪಿಸುವಂತೆ ಮನವಿ ಮಾಡಿದ್ದಾರೆ.

ಡಿಸೆಂಬರ್ 28ರಂದು ಈ ಘಟನೆ ನಡೆದಿದ್ದು, ಜಿಲ್ಲಾಧಿಕಾರಿ ಅನುಗ್ರಹ್. ಪಿಅವರು ರೈತರ ಮನವಿ ಆಲಿಸಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ್ದರು.ಇದಾದನಂತರ ಆ ಗ್ರಾಮದಲ್ಲಿ ಟ್ರಾನ್ಸ್‌ಫಾರ್ಮರ್‌ ಸ್ಥಾಪಿಸಲಾಗಿದೆ ಎಂದು ಎಎನ್‍ಐ ವರದಿ ಮಾಡಿದೆ.
ಈ ಬಗ್ಗೆ ಎನ್‍ಡಿಟಿವಿ ಜತೆ ಮಾತನಾಡಿದ ರೈತ, ಗದ್ದೆಗೆ ಪಂಪ್ ಸೆಟ್ ಅಳವಡಿಸುವುದಕ್ಕಾಗಿ ತಾವು ಟ್ರಾನ್ಸ್‌ಫಾರ್ಮರ್‌ ಬೇಕು ಎಂದು ಕೇಳಿದ್ದೆ. ಇದಕ್ಕಾಗಿ ಸ್ಥಳೀಯ ವಿದ್ಯುತ್ ಇಲಾಖೆಯಲ್ಲಿ ₹40,000 ಮುಂಗಡ ಹಣವನ್ನೂ ನೀಡಿದ್ದೆ., ಟ್ರಾನ್ಸ್‌ಫಾರ್ಮರ್‌ ಸ್ಥಾಪಿಸದೇ ಇದ್ದರೆ ಬೆಳೆ ನಾಶವಾಗುತ್ತಿತ್ತು ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.