ADVERTISEMENT

ಮಧ್ಯಪ್ರದೇಶದಲ್ಲಿ ನೃತ್ಯ ಮ್ಯಾರಥಾನ್: ಗಿನ್ನಿಸ್ ದಾಖಲೆ ಸೇರಿದ 24 ಗಂಟೆ ಪ್ರದರ್ಶನ

ಪಿಟಿಐ
Published 21 ಫೆಬ್ರುವರಿ 2025, 5:47 IST
Last Updated 21 ಫೆಬ್ರುವರಿ 2025, 5:47 IST
<div class="paragraphs"><p>ಗಿನ್ನಿಸ್‌ ತಂಡ ಮುಖ್ಯಮಂತ್ರಿ ಮೋಹನ್‌ ಯಾದವ್‌ ಅವರಿಗೆ ಪ್ರಮಾಣಪತ್ರ ಹಸ್ತಾಂತರಿಸಿತು</p></div>

ಗಿನ್ನಿಸ್‌ ತಂಡ ಮುಖ್ಯಮಂತ್ರಿ ಮೋಹನ್‌ ಯಾದವ್‌ ಅವರಿಗೆ ಪ್ರಮಾಣಪತ್ರ ಹಸ್ತಾಂತರಿಸಿತು

   

ಚಿತ್ರಕೃಪೆ: @MP_MyGov

ಛತ್ರಾಪುರ: ಮಧ್ಯಪ್ರದೇಶದಲ್ಲಿ ನಡೆದ 51ನೇ ಖಜುರಾಹೊ ನೃತ್ಯ ಉತ್ಸವದಲ್ಲಿ 139 ಕಲಾವಿದರು ನಿರಂತರ 24 ಗಂಟೆಗಳ ಕಾಲ ನೃತ್ಯ ಪ್ರದರ್ಶಿಸುವ ಮೂಲಕ ಗಿನ್ನಿಸ್‌ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ADVERTISEMENT

ನೃತ್ಯ ಮ್ಯಾರಥಾನ್‌ ಬುಧವಾರ ಮಧ್ಯಾಹ್ನ 2.34ರ ಹೊತ್ತಿಗೆ ಆರಂಭವಾಗಿ ಗುರುವಾರ ಮಧ್ಯಾಹ್ನ 2.43ಕ್ಕೆ ಅಂತ್ಯಗೊಂಡಿದೆ. ನಿರಂತರವಾಗಿ 24 ಗಂಟೆ 9 ನಿಮಿಷ 26 ಸೆಕೆಂಡ್‌ಗಳ ಕಾಲ ಕಲಾವಿದರು ಪ್ರದರ್ಶನ ನೀಡಿದ್ದಾರೆ. ಕಾರ್ಯಕ್ರಮದ ಬಳಿಕ ಪ್ರದರ್ಶನವು ವಿಶ್ವ ದಾಖಲೆ ನಿರ್ಮಿಸಿದೆ ಎಂದು ಘೋಷಿಸಲಾಗಿದ್ದು, ಗಿನ್ನಿಸ್‌ ತಂಡ ಮುಖ್ಯಮಂತ್ರಿ ಮೋಹನ್‌ ಯಾದವ್‌ ಅವರಿಗೆ ಪ್ರಮಾಣಪತ್ರವನ್ನು ನೀಡಿದೆ. ಇದರ ವಿಡಿಯೊವನ್ನು ಮಧ್ಯಪ್ರದೇಶ ಸರ್ಕಾರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.

ಈ ಕಾರ್ಯಕ್ರಮವನ್ನು ಮಧ್ಯಪ್ರದೇಶ ಸಾಂಸ್ಕೃತಿಕ ಇಲಾಖೆ ಆಯೋಜಿಸಿತ್ತು. ಕಥಕ್‌, ಭರತನಾಟ್ಯ, ಕುಚಿಪುಡಿ, ಮೋಹಿನಿಯಟ್ಟಂ ಮತ್ತು ಒಡಸ್ಸಿ ನೃತ್ಯವನ್ನು ಪ್ರದರ್ಶಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.