ಸಾವು (ಪ್ರಾತಿನಿಧಿಕ ಚಿತ್ರ)
ಮಧ್ಯಪ್ರದೇಶ: ಸಹೋದರನೊಂದಿಗೆ ತಂದೆಯ ಅಂತ್ಯಕ್ರಿಯೆ ವಿಚಾರವಾಗಿ ಗಲಾಟೆ ಮಾಡಿಕೊಂಡು ಶವಸಂಸ್ಕಾರಕ್ಕೆ ಅರ್ಧ ಮೃತದೇಹ ಕೊಡುವಂತೆ ಬೇಡಿಕೆಯಿಟ್ಟ ವಿಚಿತ್ರ ಘಟನೆ ಮಧ್ಯಪ್ರದೇಶದ ಟಿಕಮ್‌ಗಢ್ ಜಿಲ್ಲೆಯಲ್ಲಿ ನಡೆದಿದೆ.
ಸಹೋದರರ ಗಲಾಟೆ ತಾರಕಕ್ಕೇರಿದ ಕಾರಣ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು.
‘ಕಿರಿಯ ಮಗ ದೇಶರಾಜ್ ಎನ್ನುವವರೊಂದಿಗೆ ವಾಸಿಸುತ್ತಿದ್ದ ಧ್ಯಾನಿ ಸಿಂಗ್ ಗೋಷ್ ದೀರ್ಘಕಾಲದ ಅನಾರೋಗ್ಯದಿಂದ ಭಾನುವಾರ ಮೃತಪಟ್ಟಿದ್ದರು. ಗ್ರಾಮದ ಹೊರಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದ ಹಿರಿಯ ಮಗ ಕಿಶನ್ ಸುದ್ದಿ ತಿಳಿಯುತ್ತಿದ್ದಂತೆ ದೇಶರಾಜ್ ಮನೆಗೆ ಬಂದಿದ್ದರು. ಈ ವೇಳೆ ಹಿರಿಯ ಮಗ ಕಿಶನ್ ತನ್ನ ತಂದೆಯ ಅಂತ್ಯಕ್ರಿಯೆಯನ್ನು ಮಾಡುವುದಾಗಿ ಹೇಳಿ ಗಲಾಟೆ ಮಾಡಿದ್ದಾನೆ. ಆದರೆ ಕಿರಿಯ ಮಗ ಶವಸಂಸ್ಕಾರವನ್ನು ನಡೆಸುವುದು ಮೃತ ವ್ಯಕ್ತಿಯ ಬಯಕೆ ಎಂದು ಹೇಳಿಕೊಂಡಿದ್ದಾನೆ. ಮದ್ಯದ ಅಮಲಿನಲ್ಲಿದ್ದ ಕಿಶನ್, ದೇಹವನ್ನು ಅರ್ಧದಷ್ಟು ಕತ್ತರಿಸಿ ಸಹೋದರರ ನಡುವೆ ಹಂಚಬೇಕೆಂದು ಒತ್ತಾಯಿಸುತ್ತಿದ್ದನು. ಇದೇ ವೇಳೆ ಪೊಲೀಸರು ಸ್ಥಳಕ್ಕಾಗಮಿಸಿ ಕಿಶನ್‌ನನ್ನು ಮನವೊಲಿಸಿದ್ದು, ಕಿರಿಯ ಮಗ ಶವಸಂಸ್ಕಾರವನ್ನು ನೆರವೇರಿಸಿದರು’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.