ADVERTISEMENT

ಮುಂಬೈ ಪೊಲೀಸರಿಗೆ ಹುಸಿ ಕರೆ: ವ್ಯಕ್ತಿ ಸೆರೆ

ಪಿಟಿಐ
Published 9 ಜನವರಿ 2022, 15:28 IST
Last Updated 9 ಜನವರಿ 2022, 15:28 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜಬಲ್‌ಪುರ: ಭಯೋತ್ಪಾದಕ ದಾಳಿ ಕುರಿತು ಮುಂಬೈ ಪೊಲೀಸರ ನಿಯಂತ್ರಣ ಕೊಠಡಿಗೆ ಹುಸಿ ಕರೆ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಮಧ್ಯಪ್ರದೇಶ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಮುಂಬೈ ಪೊಲೀಸರು ನೀಡಿದ ಮೊಬೈಲ್‌ ಸಂಖ್ಯೆ ಆಧಾರದಲ್ಲಿ ಜಿತೇಶ್‌ ಠಾಕೂರ್‌ (35) ಎಂಬಾತನನ್ನು ಬಂಧಿಸಲಾಗಿದೆ ಎಂದು ಜಬಲ್‌ಪುರದ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ನಿರುದ್ಯೋಗಿ ಹಾಗೂ ಕುಡಿತದ ಚಟವಿರುವ ಆರೋಪಿಯು ಜನವರಿ 6ರಂದು ಮುಂಬೈ ಪೊಲೀಸರಿಗೆ ಕರೆ ಮಾಡಿ, ತಾನು ಸೇನೆಯಿಂದ ಬಂದ ವ್ಯಕ್ತಿಯಾಗಿದ್ದು, ಮುಂಬೈನಲ್ಲಿ ‘ಅಣು ಬಾಂಬ್‌’ ದಾಳಿ ನಡೆಯಲಿದೆ. ಅಲ್ಲದೆ ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಸ್‌(ಸಿಎಸ್‌ಎಂಟಿ), ಕುರ್ಲಾ ರೈಲು ನಿಲ್ದಾಣ ಸೇರಿದಂತೆ ವಿವಿಧೆಡೆಯೂ ಬಾಂಬ್ ದಾಳಿಗಳು ನಡೆಯಲಿವೆ’ ಎಂದು ತಿಳಿಸಿರುವುದಾಗಿ ಪೊಲೀಸರು ವಿವರಿಸಿದ್ದಾರೆ.

ADVERTISEMENT

ಕರೆಯ ಹಿನ್ನೆಲೆಯಲ್ಲಿ ವಿವಿಧ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಿದರೂ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಹಾಗಾಗಿ ಇದು ಹುಸಿ ಕರೆ ಎಂಬುದು ದೃಢವಾಯಿತು ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.