ನವದೆಹಲಿ: ಸಂಸತ್ತಿನ ಕ್ಯಾಂಟೀನ್ನಲ್ಲಿ ಊಟ ಮತ್ತು ಉಪಹಾರದ ಸಬ್ಸಿಡಿ ಪಡೆಯದಿರಲು ಸಂಸದರು ಸರ್ವಾನುಮತದಿಂದ ನಿರ್ಧರಿಸಿದ್ದಾರೆ ಎಂದು ಮೂಲಗಳು ಗುರುವಾರ ತಿಳಿಸಿವೆ.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಸಲಹೆ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.
ಲೋಕಸಭೆಯ ಸಂಸದೀಯ ವ್ಯವಹಾರ ಸಲಹಾ ಸಮಿತಿ ಸಭೆಯಲ್ಲಿ ಎಲ್ಲ ಪಕ್ಷಗಳ ಸದಸ್ಯರು ಸಿಬ್ಸಿಡಿ ಬಿಟ್ಟುಕೊಡಲು ಒಪ್ಪಿಗೆ ನೀಡಿದ್ದಾರೆ. ಇದರಿಂದ ವರ್ಷಕ್ಕೆ ₹17 ಕೋಟಿ ಉಳಿತಾಯ ಆಗಲಿದೆ. ಇನ್ನು ಮುಂದೆ ಸಂಸತ್ ಕ್ಯಾಂಟೀನ್ನಲ್ಲಿ ಊಟ ಮತ್ತು ಉಪಹಾರವು ವಾಸ್ತವ ದರದಲ್ಲಿಯೇ ಮಾರಾಟ ಮಾಡಲಾಗುತ್ತದೆ.
ಈವರೆಗೆ ಸಬ್ಸಿಡಿ ದರದಲ್ಲಿ ಸಂಸದರಿಗೆ ದೊರೆಯುತ್ತಿದ್ದ ಊಟ, ಉಪಹಾರದ ವಿವರ
ಬ್ರೆಡ್ ಮತ್ತು ಬೆಣ್ಣೆ; ₹6
ಚಪಾತಿ; ₹2
ಚಿಕನ್ ಕರಿ; ₹50
ಚಿಕನ್ ಕಟ್ಲೆಟ್ (ಪ್ರತಿ ಪ್ಲೇಟ್); ₹41
ತಂದೂರಿ ಚಿಕನ್; ₹60
ಕಾಫಿ; ₹5
ಪ್ಲೇನ್ ದೋಸೆ; ₹12
ಫಿಶ್ ಕರಿ; ₹40
ಹೈದರಾಬಾದಿ ಚಿಕನ್ ಬಿರಿಯಾನಿ; 65
ಮಟನ್ ಕರಿ; ₹45
ಅನ್ನ; ₹7
ಸೂಪ್; ₹14
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.