ನವದೆಹಲಿ: ಸಂಸತ್ತಿನ ಕ್ಯಾಂಟೀನ್ನಲ್ಲಿ ಊಟ ಮತ್ತು ಉಪಹಾರದ ಸಬ್ಸಿಡಿ ಪಡೆಯದಿರಲು ಸಂಸದರು ಸರ್ವಾನುಮತದಿಂದ ನಿರ್ಧರಿಸಿದ್ದಾರೆ ಎಂದು ಮೂಲಗಳು ಗುರುವಾರ ತಿಳಿಸಿವೆ.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಸಲಹೆ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.
ಲೋಕಸಭೆಯ ಸಂಸದೀಯ ವ್ಯವಹಾರ ಸಲಹಾ ಸಮಿತಿ ಸಭೆಯಲ್ಲಿ ಎಲ್ಲ ಪಕ್ಷಗಳ ಸದಸ್ಯರು ಸಬ್ಸಿಡಿ ಬಿಟ್ಟುಕೊಡಲು ಒಪ್ಪಿಗೆ ನೀಡಿದ್ದಾರೆ. ಇದರಿಂದ ವರ್ಷಕ್ಕೆ ₹17 ಕೋಟಿ ಉಳಿತಾಯ ಆಗಲಿದೆ. ಇನ್ನು ಮುಂದೆ ಸಂಸತ್ ಕ್ಯಾಂಟೀನ್ನಲ್ಲಿ ಊಟ ಮತ್ತು ಉಪಹಾರವು ವಾಸ್ತವ ದರದಲ್ಲಿಯೇ ಮಾರಾಟ ಮಾಡಲಾಗುತ್ತದೆ.
ಈವರೆಗೆ ಸಬ್ಸಿಡಿ ದರದಲ್ಲಿ ಸಂಸದರಿಗೆ ದೊರೆಯುತ್ತಿದ್ದ ಊಟ,ಉಪಹಾರದ ವಿವರ
ಆಹಾರ | ದರ (₹) |
ಬ್ರೆಡ್ ಮತ್ತು ಬೆಣ್ಣೆ | 6 |
ಚಪಾತಿ | 2 |
ಚಿಕನ್ ಕರಿ | 50 |
ಚಿಕನ್ ಕಟ್ಲೆಟ್ (ಪ್ರತಿ ಪ್ಲೇಟ್) | 41 |
ತಂದೂರಿ ಚಿಕನ್ | 60 |
ಕಾಫಿ | 5 |
ಪ್ಲೇನ್ ದೋಸೆ | 12 |
ಫಿಶ್ ಕರಿ | 40 |
ಹೈದರಾಬಾದಿ ಚಿಕನ್ ಬಿರಿಯಾನಿ | 65 |
ಮಟನ್ ಕರಿ | 45 |
ಅನ್ನ | 7 |
ಸೂಪ್ | 14 |
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.