ADVERTISEMENT

ನಾಲ್ಕನೇ ವರ್ಷದಲ್ಲಿ ಕುಂಟುತ್ತಿದೆ ‘ಮುದ್ರಾ’

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2019, 20:13 IST
Last Updated 3 ಫೆಬ್ರುವರಿ 2019, 20:13 IST
   

ನವದೆಹಲಿ:ಪ್ರಧಾನ ಮಂತ್ರಿ ಮುದ್ರಾ ಯೋಜನೆಯು ‘ಉದ್ಯೋಗ ಆಕಾಂಕ್ಷಿಗಳನ್ನು ಉದ್ಯೋಗದಾತರನ್ನಾಗಿ ಮಾಡಿದೆ’ ಎಂದು ಕೇಂದ್ರ ಹಣಕಾಸು ಸಚಿವ ಪೀಯೂಷ್ ಗೋಯಲ್ ಅವರು ಬಜೆಟ್ ಮಂಡನೆ ವೇಳೆ ಹೇಳಿದ್ದರು.

ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆಗಳಿಗೆ ಸಾಲ ನೀಡುವ ಈ ಯೋಜನೆಯು ಆರಂಭದ ಮೂರು ವರ್ಷಗಳಲ್ಲಿ ನಿಗದಿತ ಗುರಿಯನ್ನು ಮುಟ್ಟಿತ್ತು. ಆದರೆ 2018–19ನೇ ಆರ್ಥಿಕ ವರ್ಷದಲ್ಲಿ ಗುರಿಯ ಅರ್ಧದಷ್ಟನ್ನು ಮಾತ್ರ ಸಾಧಿಸಲಾಗಿದೆ.

‘ಪೂರ್ಣ ಗುರಿಯನ್ನು ಮುಟ್ಟುವುದು ಅಸಾಧ್ಯ’ ಎಂಬ ಅಭಿಪ್ರಾಯವನ್ನು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವಾಲಯದ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.