ADVERTISEMENT

ಸರ್ಕಾರಿ ಬಂಗಲೆ ತೊರೆಯಲು ಮೆಹಬೂಬಾಗೆ ನೋಟಿಸ್‌

ಪಿಟಿಐ
Published 27 ನವೆಂಬರ್ 2022, 10:53 IST
Last Updated 27 ನವೆಂಬರ್ 2022, 10:53 IST
ಮೆಹಬೂಬಾ ಮುಫ್ತಿ
ಮೆಹಬೂಬಾ ಮುಫ್ತಿ   

ಶ್ರೀನಗರ: ಸರ್ಕಾರಿ ಬಂಗಲೆಯನ್ನು 24 ಗಂಟೆಗಳೊಳಗೆ ತೆರವುಗೊಳಿಸುವಂತೆ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಮತ್ತು ಏಳು ಮಂದಿ ಮಾಜಿ ಶಾಸಕರಿಗೆ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ ಜಿಲ್ಲೆಯ ಜಿಲ್ಲಾಧಿಕಾರಿ ಭಾನುವಾರ ನೋಟಿಸ್‌ ನೀಡಿದ್ದಾರೆ.

ದಕ್ಷಿಣ ಕಾಶ್ಮೀರದ ಖಾನಬಾಲ್‌ನ ಹೌಸಿಂಗ್‌ ಕಾಲೊನಿಯಲ್ಲಿರುವ ಬಂಗಲೆಯಿಂದ ಬೇರೆಡೆಗೆ ತೆರಳುವಂತೆ ನೋಟಿಸ್‌ ನೀಡಿದ್ದು, ತೆರಳದಿದ್ದರೆ ಕ್ರಮಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

ಮಾಜಿ ಶಾಸಕರಾದ ಮೊಹಮ್ಮದ್‌ ಅಲ್ತಾಫ್‌ ವಾನಿ, ಅಬ್ದುಲ್‌ ರಹೀಂ ರಾಥರ್‌, ಅಬ್ದುಲ್‌ ಮಜೀದ್‌ ಭಟ್‌, ಅಲ್ತಾಫ್‌ ಶಾ, ಮತ್ತು ಅಬ್ದುಲ್‌ ಕಬೀರ್‌ ಪಠಾಣ್‌ ಹಾಗೂ ವಿಧಾನ ಪರಿಷತ್‌ ಮಾಜಿ ಸದಸ್ಯರಾದ ಬಶೀರ್‌ ಶಾ ಮತ್ತು ಚೌಧರಿ ನಿಜಾಮುದ್ದೀನ್‌ ಅವರಿಗೆ ನೋಟಿಸ್‌ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಗುಪ್ಕರ್ ಪ್ರದೇಶದಲ್ಲಿರುವ ಫೇರ್‌ವ್ಯೂ ಬಂಗಲೆಯಿಂದ ತೆರಳುವಂತೆಮೆಹಬೂಬಾ ಅವರಿಗೆ ಕಳೆದ ತಿಂಗಳು ನೋಟಿಸ್‌ ನೀಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.