ADVERTISEMENT

ಮುಲಾಯಂಗೆ ಪತ್ನಿ ವಿಯೋಗ: ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಾಧನಾ

​ಪ್ರಜಾವಾಣಿ ವಾರ್ತೆ
Published 9 ಜುಲೈ 2022, 14:29 IST
Last Updated 9 ಜುಲೈ 2022, 14:29 IST
ಮುಲಾಯಂ ಸಿಂಗ್‌ ಯಾದವ್ ಜೊತೆ ಪತ್ನಿ ಸಾಧನಾ ಗುಪ್ತಾ (ಪಿಟಿಐ ಸಂಗ್ರಹ ಚಿತ್ರ)
ಮುಲಾಯಂ ಸಿಂಗ್‌ ಯಾದವ್ ಜೊತೆ ಪತ್ನಿ ಸಾಧನಾ ಗುಪ್ತಾ (ಪಿಟಿಐ ಸಂಗ್ರಹ ಚಿತ್ರ)   

ಲಖನೌ: ಸಮಾಜವಾದಿ ಪಕ್ಷದ (ಎಸ್‌ಪಿ) ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್‌ ಅವರ ಪತ್ನಿ ಸಾಧನಾ ಗುಪ್ತ ಶನಿವಾರ ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ನಿಧನರಾದರು.

ಗುಪ್ತಾ ಅವರು ಕಳೆದ ಮೂರು ತಿಂಗಳಿಂದ ಶ್ವಾಸಕೋಶ ಸೋಂಕು ಮತ್ತು ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿದ್ದರು. ಈ ಸಂಬಂಧ ಇಲ್ಲಿನ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಸಮಾಜವಾದಿ ಪಕ್ಷದ ಮೂಲಗಳು ತಿಳಿಸಿವೆ.

ಗುಪ್ತಾ ಅವರು ಮುಲಾಯಂ ಅವರ ಎರಡನೇ ಪತ್ನಿ. ಯಾದವ್‌ ಅವರ ಮೊದಲನೇ ಪತ್ನಿ, ಎಸ್ಪಿ ಮುಖ್ಯಸ್ಥ ಅಖಿಲೇಶ್‌ ಸಿಂಗ್ ಅವರ ತಾಯಿ ಮಾಲ್ತಿ ದೇವಿ ಅವರು 2003ರಲ್ಲಿ ನಿಧನರಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.