ADVERTISEMENT

ಹಲವು ಸಿ.ಎಂ ಅಭ್ಯರ್ಥಿಗಳ ಉಪಸ್ಥಿತಿ ನಮ್ಮ ಬಲ: ಖರ್ಗೆ

ಪಿಟಿಐ
Published 10 ನವೆಂಬರ್ 2022, 13:42 IST
Last Updated 10 ನವೆಂಬರ್ 2022, 13:42 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ಶಿಮ್ಲಾ: ‘ಹಿಮಾಚಲ ಪ್ರದೇಶದಲ್ಲಿ ಹಲವಾರು ಮುಖ್ಯಮಂತ್ರಿ ಅಭ್ಯರ್ಥಿಗಳ ಉಪಸ್ಥಿತಿಯು ನಮ್ಮ ಬಲವೇ ಹೊರತು ದೌರ್ಬಲ್ಯವಲ್ಲ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಹೇಳಿದರು.

‘ಇದಕ್ಕೆ ತದ್ವಿರುದ್ಧವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಂಬಿ ಆಡಳಿತರೂಢ ಸರ್ಕಾರವಾದ ಬಿಜೆಪಿ ಚುನಾವಣಾ ಕಣಕ್ಕೆ ಇಳಿಯುತ್ತಿದೆ. ಏಕೆಂದರೆ, ಇಲ್ಲಿನ (ಹಿಮಾಚಲ ಪ್ರದೇಶ) ಮುಖ್ಯಮಂತ್ರಿ ಜೈರಾಮ್‌ ಠಾಕೂರ್‌ ಹಾಗೂ ಅವರ ಸರ್ಕಾರದ ವೈಫಲ್ಯತೆಯ ಬಗ್ಗೆ ಬಿಜೆಪಿಗೆ ತಿಳಿದಿದೆ’ ಎಂದರು.

‘ಮೋದಿಯವರು, ಅಭ್ಯರ್ಥಿಯನ್ನು ನೋಡಬೇಡಿ. ತಮ್ಮನ್ನು ನೋಡಿ ಮತ ಹಾಕುವಂತೆ ಹೇಳುತ್ತಿದ್ದಾರೆ. ಹಿಮಾಚಲ ಪ್ರದೇಶದ ಜನರನ್ನು ಕೀಳಾಗಿ ಕಾಣುವಂತೆಮೋದಿಯವರ ವರ್ತನೆ ಇದೆ. ಚುನಾವಣೆ ಮುಗಿದ ನಂತರ ಪ್ರಧಾನಿ ಇಲ್ಲಿರುವುದಿಲ್ಲ ಎಂದು ಈ ರಾಜ್ಯದ ಜನರಿಗೆ ಗೊತ್ತಿದೆ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.