ADVERTISEMENT

ಕಂಗನಾ ರನೋಟ್‍‌ಗೆ ಮುಂಬೈ ಪೊಲೀಸರಿಂದ ಭದ್ರತೆ

ಪಿಟಿಐ
Published 10 ಸೆಪ್ಟೆಂಬರ್ 2020, 7:19 IST
Last Updated 10 ಸೆಪ್ಟೆಂಬರ್ 2020, 7:19 IST
ಕಂಗನಾ ರನೋತ್ ಅವರ‌‌ ಬಂಗಲೆ
ಕಂಗನಾ ರನೋತ್ ಅವರ‌‌ ಬಂಗಲೆ   

ಮುಂಬೈ: ಇಲ್ಲಿನಬಾಂದ್ರಾದ ಪಾಲಿ ಹಿಲ್‌ನಲ್ಲಿರುವ ಬಾಲಿವುಡ್‌ ನಟಿ ಕಂಗನಾ ರನೋತ್‌‌ ಅವರ ಬಂಗಲೆ ಮತ್ತು ಕಚೇರಿಗೆ ಮುಂಬೈ ಪೊಲೀಸ್‌ ಭದ್ರತೆ ವ್ಯವಸ್ಥೆ ಮಾಡಿದ್ದಾರೆ. ಸಬರ್ಬನ್‌ ಖಾರ್‌ ಪ್ರದೇಶದಲ್ಲಿರುವ ಅವರ ನಿವಾಸಕ್ಕೂ ಭದ್ರತೆ ಒದಗಿಸಲಾಗಿದೆಎಂದು ಅಧಿಕಾರಿಗಳು ಗುರುವಾರ ತಿಳಿಸಿದರು.

ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ(ಪಿಒಕೆ) ಹೋಲಿಸಿದ್ದ ಕಂಗನಾ, ‘ಸಿನಿಮಾ ಮಾಫಿಯಾಗಿಂತ ನಾನು ಮುಂಬೈ ಪೊಲೀಸರನ್ನು ಕಂಡರೆ ಹೆದರುತ್ತೇನೆ ಎಂದು ಟ್ವೀಟ್‌ ಮಾಡಿದ್ದರು. ಇದು ಭಾರಿ ವಿವಾದವನ್ನುಂಟು ಮಾಡಿದೆ.ಈ ಹಿನ್ನೆಲೆಯಲ್ಲಿ ಈಗಾಗಲೇ ಕಂಗನಾ ರನೋತ್‌ಗೆವೈ–ಪ್ಲಸ್‌ ಶ್ರೇಣಿಯ ಭದ್ರತೆಯನ್ನು ಕೂಡ ನೀಡಲಾಗಿದೆ.

ಕಂಗನಾ ರನೋತ್‌ ಅವರ ಬಾಂದ್ರಾದಲ್ಲಿರುವ ಬಂಗಲೆಯ ಅನಧಿಕೃತ ಎಂದು ಹೇಳಲಾದ ಭಾಗವನ್ನು ಬೃಹನ್‌ ಮುಂಬೈ ಮಹಾನಗರ ಪಾಲಿಕೆಯು ಬುಧವಾರ ನೆಲಸಮಗೊಳಿಸಿದೆ. ಕಂಗನಾ ರನೋತ್‌ ಅವರು ಹಿಮಾಚಲ ಪ್ರದೇಶದಿಂದ ಬುಧವಾರ ಮುಂಬೈಗೆ ವಾಪಸಾಗಿದ್ದಾರೆ.

ADVERTISEMENT

‘ಹಾಗಾಗಿ ಪೊಲೀಸರು ಅವರ ಬಂಗಲೆ ಹೊರಗಡೆ ಭದ್ರತಾ ವ್ಯವಸ್ಥೆಯನ್ನು ಮಾಡಿದ್ದಾರೆ. ಅವರ ಸುರಕ್ಷತೆಗಾಗಿ ಮಹಿಳಾ ಕಾನ್‌ಸ್ಟೇಬಲ್‌ಗಳನ್ನು ಕೂಡ ನಿಯೋಜಿಸಲಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.