ADVERTISEMENT

ಬಾಂಬ್ ಬೆದರಿಕೆ: ಮುಂಬೈ–ಲಖನೌ ಮಾರ್ಗದ ಇಂಡಿಗೊ ವಿಮಾನ ತಪಾಸಣೆ

ಪಿಟಿಐ
Published 15 ಡಿಸೆಂಬರ್ 2018, 18:22 IST
Last Updated 15 ಡಿಸೆಂಬರ್ 2018, 18:22 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಮುಂಬೈ: ಬಾಂಬ್ ಇದೆ ಎಂಬ ಮಾಹಿತಿ ಬಂದ ಕಾರಣಮುಂಬೈ–ಲಖನೌ ಮಾರ್ಗದ ಇಂಡಿಗೊ ವಿಮಾನವನ್ನು ಶನಿವಾರ ಇಲ್ಲಿ ತಪಾಸಣೆಗೆ ಒಳಪಡಿಸಲಾಯಿತು. ವಿಮಾನ ಸುರಕ್ಷಿತವಾಗಿದೆ ಎಂದು ಭದ್ರತಾ ಅಧಿಕಾರಿಗಳು ಘೋಷಿಸಿದರು. ಒಂದು ಗಂಟೆ ವಿಳಂಬದ ಬಳಿಕ ವಿಮಾನ ಹಾರಾಟ ನಡೆಸಿತು.

169 ಪ್ರಯಾಣಿಕರನ್ನು ಹೊತ್ತ ವಿಮಾನವು ದೆಹಲಿ ಮಾರ್ಗವಾಗಿ ಬೆಳಗ್ಗೆ 6.05ಕ್ಕೆ ಹೊರಡಲು ನಿಗದಿಯಾಗಿತ್ತು.

‘6ಇ 3612 ಸಂಖ್ಯೆಯ ಇಂಡಿಗೊ ವಿಮಾನದಲ್ಲಿ ಬಾಂಬ್ ಇದೆ ಎಂಬುದಾಗಿ ಗೋ ಏರ್ಖಾಸಗಿ ವಿಮಾನದ ಮಹಿಳಾ ಪ್ರಯಾಣಿಕರೊಬ್ಬರು ಶಂಕೆ ವ್ಯಕ್ತಪಡಿಸಿದರು. ತಕ್ಷಣ ಅಧಿಕಾರಿಗಳಿಗೆ ವಿಷಯ ತಿಳಿಸಲಾಯಿತು.ಭದ್ರತಾ ಸಿಬ್ಬಂದಿ ವಿಮಾನವನ್ನು ತಪಾಸಣೆ ನಡೆಸಿದರು’ ಎಂದು ಇಂಡಿಗೊ ವಕ್ತಾರರು ತಿಳಿಸಿದ್ದಾರೆ.

ADVERTISEMENT

ತಮ್ಮ ಶಂಕೆಗೆ ಪುಷ್ಠಿ ನೀಡುವ ಕೆಲವು ಫೋಟೊಗಳನ್ನೂ ತೋರಿಸಿದ ಅವರು, ಅದರಲ್ಲಿರುವ ವ್ಯಕ್ತಿಗಳು ದೇಶಕ್ಕೆ ಅಪಾಯಕಾರಿ ಎಂದು ಮಹಿಳೆ ಹೇಳಿಕೊಂಡಿದ್ದರು. ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಯು ಮಹಿಳೆಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದರು.ಶಂಕೆ ವ್ಯಕ್ತಪಡಿಸಿದ ಮಹಿಳೆಯು ಮಾನಸಿಕ ಅಸ್ವಸ್ಥರಂತೆ ಕಂಡುಬಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೇರೊಂದು ನಿಲ್ದಾಣಕ್ಕೆ ವಿಮಾನವನ್ನು ಕೊಂಡೊಯ್ದು ತಪಾಸಣೆ ನಡೆಸಲಾಯಿತು. ವಿಮಾನ ಸರಕ್ಷಿತವಾಗಿದೆ ಎಂಬುದು ಖಚಿತವಾದ ಬಳಿಕಕಾರ್ಯಾಚರಣೆ ಪುನರ್ ಆರಂಭಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.