ADVERTISEMENT

ನರ್ಸ್ ವೃತ್ತಿಗೆ ಮರಳಿದ ಮುಂಬೈ ಮೇಯರ್‌!

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2020, 3:58 IST
Last Updated 28 ಏಪ್ರಿಲ್ 2020, 3:58 IST
ಕಿಶೋರಿ ಪೆಡ್ನೇಕರ್
ಕಿಶೋರಿ ಪೆಡ್ನೇಕರ್   

ಮುಂಬೈ: ಕೋವಿಡ್‌–19 ರೋಗಿಗಳಿಗೆ ಸೇವೆ ಸಲ್ಲಿಸುವ ಸಲುವಾಗಿ ಸೋಮವಾರ ಮುಂಬೈನ ಮೇಯರ್ ಕಿಶೋರಿ ಪೆಡ್ನೇಕರ್ ಅವರು ತಮ್ಮ ಹಳೆಯ ನರ್ಸ್‌ ಸಮವಸ್ತ್ರ ಧರಿಸಿ ಕೆಲಸ ಮಾಡಿದರು.

‘ನಾವೆಲ್ಲಾ ಈಗ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿದ್ದೇವೆ. ಎರಡು ಮತ್ತು ಮೂರನೇ ವರ್ಷದ ನರ್ಸಿಂಗ್ ವಿದ್ಯಾರ್ಥಿನಿಯರೂ ಆರೋಗ್ಯ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಅವರ ಮನೋಸ್ಥೈರ್ಯ ಹೆಚ್ಚಿಸುವ ಸಲುವಾಗಿಯೇ ನಾನು ಮತ್ತೆ ನರ್ಸ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದೇನೆ’ ಎಂದು ಕಿಶೋರಿ ಹೇಳಿದ್ದಾರೆ.

ಈ ಹಿಂದೆ ರಾಯಗಡ ಜಿಲ್ಲೆಯ ಜವಾಹರಲಾಲ್ ನೆಹರು ಪೋರ್ಟ್‌ ಟ್ರಸ್ಟ್‌ನ ಆಸ್ಪತ್ರೆಯಲ್ಲಿ ಕಿಶೋರಿ ಪೆಡ್ನೇಕರ್ ನರ್ಸ್ ಆಗಿ ಸೇವೆ ಸಲ್ಲಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.