
ಮುಂಬೈ (ಪಿಟಿಐ): 25 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಬಿಜೆಪಿಯು ಮುಂಬೈನಲ್ಲಿ ತನ್ನ ಮೇಯರ್ ನೇಮಿಸಲು ಮುಂದಾಗಿದೆ. ಪಕ್ಷದ ಕಾರ್ಪೊರೇಟರ್ ರಿತು ತಾವ್ಡೆ ಅವರು ಶನಿವಾರ ಚುನಾವಣೆಗೆ ನಾಮಪತ್ರ ಸಲ್ಲಿಸಿದರು.
ಮಹಾಯುತಿಯಲ್ಲಿ ಬಿಜೆಪಿಯ ಮಿತ್ರಪಕ್ಷವಾದ ಶಿವಸೇನಾ, ಉಪ ಮೇಯರ್ ಹುದ್ದೆಗೆ ತನ್ನ ಅಭ್ಯರ್ಥಿಯನ್ನಾಗಿ ಸಂಜಯ್ ಘಾಡಿ ಹೆಸರನ್ನು ಘೋಷಿಸಿದೆ.
ಸಚಿವ ಮಂಗಲ್ ಪ್ರಭಾತ್ ಲೋಧಾ, ಮುಂಬೈ ಬಿಜೆಪಿ ಘಟಕದ ಮುಖ್ಯಸ್ಥ ಅಮಿತ್ ಸತಮ್, ಶಿವಸೇನಾ ಮಾಜಿ ಸಂಸದ ರಾಹುಲ್ ಶೇವಾಲೆ ಮತ್ತು ಮಹಾಯುತಿಯ ಇತರ ನಾಯಕರ ಸಮ್ಮುಖದಲ್ಲಿ ತಾವ್ಡೆ ಮತ್ತು ಘಾಡಿ ಅವರು ಪುರಸಭೆ ಕಾರ್ಯದರ್ಶಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಮೇಯರ್ ಸ್ಥಾನಕ್ಕೆ ಫೆಬ್ರವರಿ 11ರಂದು ಚುನಾವಣೆ ನಡೆಯಲಿದ್ದು, ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವೂ ಅದೇ ಆಗಿದೆ.
1997ರಿಂದಲೂ ಸತತ 25 ವರ್ಷ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ಬೃಹನ್ ಮುಂಬೈ ಮಹಾನಗರ ಪಾಲಿಕೆಯ (ಬಿಎಂಸಿ) ಆಡಳಿತದ ಚುಕ್ಕಾಣಿ ಹಿಡಿದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.