ADVERTISEMENT

ಮುಂಬೈಯಲ್ಲಿ 500 ಚದರ ಅಡಿವರೆಗಿನ ವಸತಿ ಆಸ್ತಿಗೆ ತೆರಿಗೆ ಮನ್ನಾ: ಉದ್ಧವ್ ಘೋಷಣೆ

ಮೃತ್ಯುಂಜಯ ಬೋಸ್
Published 1 ಜನವರಿ 2022, 15:46 IST
Last Updated 1 ಜನವರಿ 2022, 15:46 IST
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ   

ಮುಂಬೈ: 500 ಚದರ ಅಡಿವರೆಗಿನ ವಸತಿ ಆಸ್ತಿಗೆ ಮುಂಬೈ ನಗರದಲ್ಲಿ ಆಸ್ತಿ ತೆರಿಗೆ ಸಂಪೂರ್ಣ ಮನ್ನಾ ಮಾಡಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶನಿವಾರ ಘೋಷಿಸಿದ್ದಾರೆ.

ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಸೇರಿದಂತೆ ಮಹಾರಾಷ್ಟ್ರದಾದ್ಯಂತ ನಗರ ಪಾಲಿಕೆ ಚುನಾವಣೆಗಳು ಸಮೀಪಿಸುತ್ತಿರುವ ಬೆನ್ನಲ್ಲೇ ಈ ನಿರ್ಧಾರ ಪ್ರಕಟಿಸಲಾಗಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

ಬಿಎಂಸಿ ಆಡಳಿತದ ಚುಕ್ಕಾಣಿ ಸದ್ಯ ಠಾಕ್ರೆ ನೇತೃತ್ವದ ಶಿವಸೇನಾ ಬಳಿ ಇದೆ.

ADVERTISEMENT

ಆಸ್ತಿ ತೆರಿಗೆ ಮನ್ನಾ ನಿರ್ಧಾರವು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ನಗರಾಭಿವೃದ್ಧಿ ಇಲಾಖೆ ಸಭೆಯ ವೇಳೆ ಉದ್ಧವ್ ಠಾಕ್ರೆ ತಿಳಿಸಿದ್ದಾರೆ.

ಮುಂಬೈಯಲ್ಲಿ 16 ಲಕ್ಷಕ್ಕೂ ಹೆಚ್ಚು ಮನೆಗಳು 500 ಚದರ ಅಡಿಗಿಂತ ಕಡಿಮೆ ವಿಸ್ತಾರ ಹೊಂದಿವೆ.ಈ ನಿರ್ಧಾರದಿಂದ ಬಿಎಂಸಿ ಆದಾಯದಲ್ಲಿ ₹450 ಕೋಟಿ ನಷ್ಟ ಉಂಟಾಗಲಿದೆ ಎಂದು ಅಂದಾಜಿಸಲಾಗಿದೆ.

‘2017ರ ಬಿಎಂಸಿ ಚುನಾವಣೆಗೂ ಮುನ್ನ ನಾವು ಈ ಭರವಸೆ ನೀಡಿದ್ದೆವು. ಇಂದು ನಾವದನ್ನು ಈಡೇರಿಸಿದ್ದೇವೆ’ ಎಂದು ಠಾಕ್ರೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.