ADVERTISEMENT

ಮುಂಬೈ: 24 ತಾಸಿನಲ್ಲಿ 286 ಮಿ.ಮೀ ಮಳೆ

ಪಿಟಿಐ
Published 23 ಸೆಪ್ಟೆಂಬರ್ 2020, 5:42 IST
Last Updated 23 ಸೆಪ್ಟೆಂಬರ್ 2020, 5:42 IST
ಮುಂಬೈನಲ್ಲಿ ಮಳೆಯಿಂದಾಗಿ ನೀರಿನಲ್ಲಿ ಸಿಲುಕಿರುವ ಬಸ್ಸುಗಳು
ಮುಂಬೈನಲ್ಲಿ ಮಳೆಯಿಂದಾಗಿ ನೀರಿನಲ್ಲಿ ಸಿಲುಕಿರುವ ಬಸ್ಸುಗಳು   

ಮುಂಬೈ: ಕಳೆದ 24 ಗಂಟೆಗಳಲ್ಲಿ ಮುಂಬೈನಲ್ಲಿ ಭಾರೀ ಮಳೆ ಸುರಿದಿದೆ. ಇದರಿಂದ ಹಲವೆಡೆ ರಸ್ತೆಗಳು ಜಲಾವೃತವಾಗಿದ್ದು, ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.

ಸಾಂತಾಕ್ರೂಜ್‌ನಲ್ಲಿ 286.4 ಮಿ.ಮೀ ಮತ್ತು ದಕ್ಷಿಣ ಮಂಬೈನ ಕೊಲಾಬಾದಲ್ಲಿ 147.8 ಮಿ.ಮೀ ಮಳೆ ಸುರಿದಿದೆ. ಇದು ಈ ಮುಂಗಾರು ಋತುವಿನಲ್ಲಿ ಸುರಿದ ಅತ್ಯಧಿಕ ಮಳೆಯಾಗಿದೆ ಎಂದುಮುಂಬೈನ ಐಎಂಡಿ ಕೇಂದ್ರದ ಉಪ ಮಹಾನಿರ್ದೇಶಕ ಕೆ.ಎಸ್‌ ಹೊಸಲಿಕರ್‌ ಅವರು ತಿಳಿಸಿದರು.

ಮುಂಬೈ ಮತ್ತು ಉಪನಗರಗಳಲ್ಲಿ ಬುಧವಾರವೂ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.