ADVERTISEMENT

ಇಡಿ ಎದುರು ಹಾಜರಾದ ಮುಂಬೈ ರಿಯಲ್ ಎಸ್ಟೇಟ್ ಉದ್ಯಮಿ ಸುಧಾಕರ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2020, 15:12 IST
Last Updated 7 ಫೆಬ್ರುವರಿ 2020, 15:12 IST
   

ಮುಂಬೈ (ಮಹಾರಾಷ್ಟ್ರ): ಇಕ್ಬಾಲ್ ಮಿರ್ಚಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ರಿಯಲ್ ಎಸ್ಟೇಟ್ ಉದ್ಯಮಿ ಸುಧಾಕರಶೆಟ್ಟಿ ಜಾರಿನಿರ್ದೇಶನಾಲಯದ ಅಧಿಕಾರಿಗಳ ಮುಂದೆ ಶುಕ್ರವಾರ ಹಾಜರಾಗಿದ್ದಾರೆ.

ದಾವೂದ್ ಇಬ್ರಾಹಿಂ ಸಹಚರನಾಗಿರುವ ಇಕ್ಬಾಲ್ ಮಿರ್ಚಿಯ ಅಕ್ರಮ ಹಣ ಹೂಡಿಕೆ ಪ್ರಕರಣದಲ್ಲಿ ಸುಧಾಕರ್ ಶೆಟ್ಟಿ ಹೆಸರು ಕೇಳಿಬಂದಿತ್ತು. ಸಹನಾ ಗ್ರೂಪ್ ಆಫ್ ಕಂಪನೀಸ್ ಮುಖ್ಯಸ್ಥರಾಗಿರುವ ಸುಧಾಕರ್ ಶೆಟ್ಟಿಗೆ ಜಾರಿ ನಿರ್ದೇಶನಾಲಯ ಕಳೆದ ವಾರನೋಟೀಸ್ ಜಾರಿ ಮಾಡಿತ್ತು.

ಜಾರಿನಿರ್ದೇಶನಾಲಯದ ಅಧಿಕಾರಿಗಳುಸುಧಾಕರಶೆಟ್ಟಿ ವಿಚಾರಣೆ ನಡೆಸಲುಅವರ ಕಚೇರಿ ಮನೆಗಳಲ್ಲಿ ಶೋಧ ನಡೆಸಿತ್ತು.

ADVERTISEMENT

ದಾವೂದ್ ಇಬ್ರಾಹಿಂ ಸಹಚರ ಇಕ್ಬಾಲ್ ಮಿರ್ಚಿ ತನ್ನ ಕುಟುಂಬದ ಸದಸ್ಯರು, ಸಂಬಂಧಿಕರ ಹೆಸರಿನಲ್ಲಿ ಮುಂಬೈ, ದುಬೈ, ಸೇರಿದಂತೆ ವಿದೇಶಗಳಲ್ಲಿ ಅಕ್ರಮಆಸ್ತಿ ಸಂಪಾದಿಸಿದ್ದಾನೆ ಎಂದು ಆರೋಪವಿದೆ. ಈ ಸಂಬಂಧ ತನಿಖೆ ಚುರುಕುಗೊಳಿಸಿರುವ ಜಾರಿ ನಿರ್ದೇಶನಾಲಯ ಮಿರ್ಚಿ 10 ಆಸ್ತಿಗಳು, ಅರಬ್ ನಲ್ಲಿ ಒಂದು ವಿದೇಶದಲ್ಲಿ 25 ಆಸ್ತಿಖರೀದಿಸಿರುವ ಕುರಿತು ಮಾಹಿತಿ ಇದೆ ಎಂದು ತಿಳಿಸಿರುವುದಾಗಿ ಎಎನ್ಐ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.