ADVERTISEMENT

ಮೌಂಟ್‌ ಎವರೆಸ್ಟ್‌ ಚಾರಣದ ವೇಳೆ ಮುಂಬೈ ಮೂಲದ ವೈದ್ಯೆ ಸಾವು

ಭಾನುವಾರ ತಡರಾತ್ರಿ ವಿಮಾನದ ಮೂಲಕ ಪಾರ್ಥೀವ ಶರೀರ ಭಾರತಕ್ಕೆ

ಪಿಟಿಐ
Published 8 ಮೇ 2022, 10:35 IST
Last Updated 8 ಮೇ 2022, 10:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ನೇಪಾಳದಲ್ಲಿರುವ ವಿಶ್ವದ ಅತಿ ಎತ್ತರದ ಪರ್ವತ ಮೌಂಟ್‌ ಎವರೆಸ್ಟ್‌ ಬೇಸ್‌ ಕ್ಯಾಂಪಿಗೆ ಚಾರಣ ಮಾಡುವವೇಳೆ ಹೃದಯಾಘಾತದಿಂದ ಮುಂಬೈ ಮೂಲದ ವೈದ್ಯೆ ಮೃತಪಟ್ಟಿದ್ದಾರೆ. ಡಾ.ಪ್ರಜ್ಞಾ ಸಾಮಂತ್ (52) ಮೃತ ಮಹಿಳೆ.

‘ಇವರು ಮುಂಬೈನ ಗುರುಗ್ರಾಮ ನಿವಾಸಿ . ಭಾನುವಾರ ತಡರಾತ್ರಿ ವಿಮಾನದ ಮೂಲಕ ಪಾರ್ಥಿವ ಶರೀರವನ್ನು ಮುಂಬೈ ತರಲಾಗುತ್ತದೆ. ಸೋಮವಾರ ಇಲ್ಲಿನ ಶಿವಧಾಮ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ’ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT