ADVERTISEMENT

ಮಾಜಿ ಸಿಎಂ ವಿರುದ್ಧ ದೂರು ನೀಡಿದ್ದ ವ್ಯಕ್ತಿ ಕೊಲೆ: ಬಿಆರ್‌ಎಸ್‌ ವಿರುದ್ಧ ಟೀಕೆ

ಪಿಟಿಐ
Published 20 ಫೆಬ್ರುವರಿ 2025, 15:41 IST
Last Updated 20 ಫೆಬ್ರುವರಿ 2025, 15:41 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಹೈದರಾಬಾದ್‌: ‘ಕಾಲೇಶ್ವರಂ ನೀರಾವರಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ’ ಎಂದು ಆರೋಪಿಸಿ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್, ಇತರರ ವಿರುದ್ಧ ದೂರು ನೀಡಿದ್ದ ವ್ಯಕ್ತಿಯೊಬ್ಬರ ಕೊಲೆಯಾಗಿದೆ. ಇದು, ರಾಜಕೀಯ ವಾಕ್ಸಮರಕ್ಕೂ ಆಸ್ಪದವಾಗಿದೆ.

ADVERTISEMENT

ದೂರು ನೀಡಿದ್ದ ಎನ್.ರಾಜಲಿಂಗಮೂರ್ತಿ (50) ಕೊಲೆಗೀಡಾದವರು. ಜಯಶಂಕರ ಭೂಪಲಪಲ್ಲಿ ಪಟ್ಟಣದಲ್ಲಿ ಬುಧವಾರ ಸಂಜೆ ಬೈಕ್‌ನಲ್ಲಿ ತೆರಳುತ್ತಿದ್ದ ಇವರನ್ನು ಅಡ್ಡಗಟ್ಟಿದ ಅಪರಿಚಿತರ ಗುಂಪು ಚಾಕುವಿನಿಂದ ಇರಿದು ಕೊಲೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಮೃತನ ಕುಟುಂಬದ ಸದಸ್ಯರು ಮತ್ತು ಆಡಳಿತರೂಢ ಕಾಂಗ್ರೆಸ್‌ ಪಕ್ಷವು, ಈ ಕೊಲೆಗೆ ಭಾರತ್‌ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಪಕ್ಷ ಕಾರಣ ಎಂದು ಆರೋಪಿಸಿವೆ. ಆದರೆ, ಬಿಆರ್‌ಎಸ್‌ ಈ ಆರೋಪವನ್ನು ಅಲ್ಲಗಳೆದಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೆಲಂಗಾಣದ ಸಚಿವ ಕೋಮಟಿರೆಡ್ಡಿ ವೆಂಕಟರೆಡ್ಡಿ ಅವರು, ಬಿಆರ್‌ಎಸ್‌ ಪಕ್ಷವು ಕಳೆದ 10 ವರ್ಷಗಳ ಅವಧಿಯಲ್ಲಿ ಕೊಲೆ, ಅಪರಾಧ ಪ್ರವೃತ್ತಿಗೆ ಉತ್ತೇಜನ ನೀಡಿದೆ ಎಂದು ಆರೋಪಿಸಿದರು.

ಕೊಲೆ ಕೃತ್ಯದಲ್ಲಿ ಮಾಜಿ ಶಾಸಕ ಗಂದ್ರ ವೆಂಕಟರಮಣ ರೆಡ್ಡಿ ಅವರು ಸೇರಿದಂತೆ ಬಿಆರ್‌ಎಸ್‌ ನಾಯಕರ ಪಾತ್ರವಿದೆ ಎಂದು ಮೃತನ ಪತ್ನಿ ಹಾಗೂ ಕುಟುಂಬದ ಇತರ ಸದಸ್ಯರು ಆರೋಪಿಸಿದ್ದಾರೆ. ಭೂ ವಿವಾದದ ಸಂಬಂಧ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.