ADVERTISEMENT

ಮುಸ್ಲಿಂ ಸಹೋದರಿಯರೇ, ನಿಮ್ಮ ನಿಜವಾದ ಸಹೋದರರನ್ನು ಗುರುತಿಸಿ: ಯೋಗಿ ಆದಿತ್ಯನಾಥ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 8:43 IST
Last Updated 11 ಏಪ್ರಿಲ್ 2019, 8:43 IST
   

ಲಖನೌ: ಕಾಂಗ್ರೆಸ್,ಎಸ್‍ಪಿ ಹಾಗೂ ಬಿಎಸ್‍ಪಿ ಅಲಿ ಮೇಲೆ ವಿಶ್ವಾಸವಿಟ್ಟರೆ, ನಮಗೆ ಬಜರಂಗ ಬಲಿ ಮೇಲೆ ನಂಬಿಕೆ ಇದೆಎಂದಿದ್ದರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ. ಇದೀಗ ಮುಸ್ಲಿಂ ಸಹೋದರಿಯರು ಅವರ ನಿಜವಾದ ಸಹೋದರರನ್ನು ಗುರುತಿಸಿ ಎಂದು ಆದಿತ್ಯನಾಥ ಕರೆ ನೀಡಿದ್ದಾರೆ.

ಉತ್ತರ ಪ್ರದೇಶದ ಆವಲಾದಲ್ಲಿಬುಧವಾರ ರ‍್ಯಾಲಿಯಲ್ಲಿ ಮಾತನಾಡಿದ ಯೋಗಿ, ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗಾಗಿ ದುಡಿದಿದ್ದಾರೆ. ದೇಶದ ಅರ್ಧಕ್ಕಿಂತಲೂ ಹೆಚ್ಚು ಜನರು ಅವರೊಂದಿಗೆ ಇದ್ದಾರೆ ಎಂಬುದು ಬಿಜೆಪಿಯ ಹೆಮ್ಮೆ.
1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದರೂ ನಮ್ಮ ಮುಸ್ಲಿಂ ಸಹೋದರಿಯರಿಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು ಇತ್ತೀಚಿಗೆ.ಅದಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಕಾರಣ.ಶತಮಾನಗಳ ಕಾಲ ನಿಂದನೆ ಮತ್ತು ಬಂಧನದಲ್ಲಿದ್ದ ನಮ್ಮ ಮುಸ್ಲಿಂ ಸಹೋದರಿಯರನ್ನು ನಾವು ಸ್ವತಂತ್ರರನ್ನಾಗಿ ಮಾಡಿದ್ದೇವೆ. ತ್ರಿವಳಿ ತಲಾಖ್‍ನಿಂದ ಅವರ ಮೇಲೆ ದೌರ್ಜನ್ಯವೆಸಗಲಾಗುತ್ತಿತ್ತು. ಇದನ್ನು ನಿಲ್ಲಿಸುವ ಮೂಲಕ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅವರಿಗೆ ಗೌರವ ತಂದು ಕೊಟ್ಟಿತು. ಮುಸ್ಲಿಂ ಸಹೋದರಿಯರೇ, ನೀವು ನಿಮ್ಮನಿಜವಾದ ಸಹೋದರರನ್ನು ಗುರುತಿಸಿಎಂದಿದ್ದಾರೆಯೋಗಿ ಆದಿತ್ಯನಾಥ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT