ADVERTISEMENT

ಗೋಧಿ ರಫ್ತು: ಅವಕಾಶದ ಸದ್ಬಳಕೆಗೆ ಮೋದಿ ಸಲಹೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2022, 16:30 IST
Last Updated 8 ಮಾರ್ಚ್ 2022, 16:30 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ‘ರಷ್ಯಾ ಹಾಗೂ ಉಕ್ರೇನ್‌ ನಡುವಿನ ಯುದ್ಧದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಗೋಧಿಗೆ ಬೇಡಿಕೆ ಹೆಚ್ಚಿದ್ದು, ಪೂರೈಕೆ ಸಾಧ್ಯವಾಗುತ್ತಿಲ್ಲ. ದೇಶದ ಉದ್ದಿಮೆದಾರರು ಗೋಧಿ ರಫ್ತು ಕ್ಷೇತ್ರದಲ್ಲಿ ಒದಗಿರುವ ಈ ಅವಕಾಶದ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದರು.

ವೆಬಿನಾರ್‌ನಲ್ಲಿ ಮಾತನಾಡಿದ ಅವರು, ರಫ್ತು–ಆಮದು ಇಲಾಖೆ, ಉದ್ಯಮಿಗಳು, ರಫ್ತುದಾರರು, ಹಣಕಾಸು ಸಂಸ್ಥೆಗಳಿಗೆ ಈ ಕುರಿತು ಸಲಹೆ ನೀಡಿದ್ದಾರೆ.

‘ಈ ಅವಕಾಶವನ್ನೇ ಸಮರ್ಥವಾಗಿ ಬಳಸಿಕೊಂಡು, ಗುಣಮಟ್ಟದ ಗೋಧಿ ಹಾಗೂ ಸೇವೆಯನ್ನು ಒದಗಿಸಿದ್ದೇಯಾದಲ್ಲಿ, ವಿಶ್ವದ ಹಲವಾರು ರಾಷ್ಟ್ರಗಳು ಮುಂದಿನ ದಿನಗಳಲ್ಲಿ ಗೋಧಿಗಾಗಿ ಭಾರತವನ್ನೇ ಅವಲಂಬಿಸಿಲಿವೆ’ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಗೋಧಿ ಬೆಳೆಯುವಲ್ಲಿ ಜಗತ್ತಿನಲ್ಲಿಯೇ ಭಾರತಕ್ಕೆ ಎರಡನೇ ಸ್ಥಾನ ಇದೆ. ಆದರೆ, ರಫ್ತು ವಿಷಯಕ್ಕೆ ಬಂದಾಗ, ಈ ಪ್ರಮಾಣ ಶೇ 1ಕ್ಕಿಂತಲೂ ಕಡಿಮೆ ಇದೆ. ಇನ್ನೊಂದೆಡೆ, ಜಾಗತಿಕವಾಗಿ ರಫ್ತಾಗುವ ಗೋಧಿಯ ಪ್ರಮಾಣದಲ್ಲಿ, ರಷ್ಯಾ ಹಾಗೂ ಉಕ್ರೇನ್‌ ಪಾಲು ಒಟ್ಟು ಶೇ 25ರಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.