ADVERTISEMENT

ಅನಾರೋಗ್ಯ: ಮ್ಯಾನ್ಮಾರ್ ಹಂಗಾಮಿ ಅಧ್ಯಕ್ಷ ಮಿಂಟ್‌ ಸ್ವೆ ನಿಧನ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 16:22 IST
Last Updated 7 ಆಗಸ್ಟ್ 2025, 16:22 IST
ಮಿಂಟ್‌ ಸ್ವೆ
ಮಿಂಟ್‌ ಸ್ವೆ   

ಬ್ಯಾಕಾಂಗ್‌: 2021ರ ಫೆಬ್ರವರಿಯಲ್ಲಿ ಆಂಗ್‌ ಸಾನ್‌ ಸೂಕಿ ಅವರ ನೇತೃತ್ವದ ಚುನಾಯಿತ ಸರ್ಕಾರವನ್ನು ಉರುಳಿಸಿ ಸೇನಾಪಡೆಗಳು ದೇಶವನ್ನು ಹಿಡಿತಕ್ಕೆ ತೆಗದುಕೊಂಡ ಬಳಿಕ ಮ್ಯಾ‌ನ್ಮಾರ್‌ನ ಹಂಗಾಮಿ ಅಧ್ಯಕ್ಷರಾಗಿದ್ದ ಮಿಂಟ್‌ ಸ್ವೆ (74) ಅವರು ಗುರುವಾರ ನಿಧನರಾದರು. 

ನೇಪೈಟೌನ ಸೇನಾ ಆಸ್ಪತ್ರೆಯಲ್ಲಿ ಗುರುವಾರ ಬೆಳಿಗ್ಗೆ ಕೊನೆಯುಸಿರೆಳೆದರು ಎಂದು ಮ್ಯಾನ್ಮಾರ್‌ನ ಸೇನಾ ಮಾಹಿತಿ ಕೇಂದ್ರದ ಕಚೇರಿಯು ತಿಳಿಸಿದೆ.

ಮಿಂಟ್‌ ಸ್ವೆ ಅವರು ಅವರು ಅನಾರೋಗ್ಯಕ್ಕೊಳಗಾಗಿದ್ದಾರೆ ಎಂದು ವರ್ಷದ ಹಿಂದೆಯೇ ಸಾರ್ವಜನಿಕವಾಗಿ ಘೋಷಿಸಲಾಗಿತ್ತು. ಆದಾದ ಬಳಿಕ ಅಧ್ಯಕ್ಷೀಯ ಜವಾಬ್ದಾರಿ ನಿರ್ವಹಿಸದಂತೆ ತಡೆಯಲಾಗಿತ್ತು. 

ADVERTISEMENT

ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವದೊಂದಿಗೆ ನಡೆಸಲಾಗುವುದು ಎಂದು ಸೇನೆಯು ತಿಳಿಸಿದ್ದು, ದಿನಾಂಕವನ್ನು ಬಹಿರಂಗಪಡಿಸಿಲ್ಲ.

‘ಮಿಂಟ್‌ ಅವರು ನರವ್ಯೂಹ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಊಟ ಸೇರಿದಂತೆ ದೈನಂದಿನ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಕಳೆದ ವರ್ಷ ಜುಲೈನಲ್ಲಿ ಸರ್ಕಾರ ಪ್ರಕಟಿಸಿತ್ತು. ಜುಲೈ 24ರಿಂದ ಸೇನಾ ಆಸ್ಪತ್ರೆಯಲ್ಲಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಗುರುವಾರ ಕೊನೆಯುಸಿರೆಳೆದರು’ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.