ADVERTISEMENT

ಮಿಜೋರಾಂ: ಇಬ್ಬರು ಮ್ಯಾನ್ಮಾರ್ ಪ್ರಜೆಗಳ ಬಂಧನ

ಪಿಟಿಐ
Published 16 ಸೆಪ್ಟೆಂಬರ್ 2021, 5:36 IST
Last Updated 16 ಸೆಪ್ಟೆಂಬರ್ 2021, 5:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಐಜ್ವಾಲ್‌: ಅಕ್ರಮ ಶಸ್ತ್ರಾಸ್ತ್ರ ಸಾಗಣೆಯ ಸುಳಿವಿನ ಆಧಾರದ ಮೇಲೆ ಮಿಜೋರಾಂನ ಲಾವ್ಂಗ್‌ಟಲೈ ಜಿಲ್ಲೆಯಲ್ಲಿ ಅಸ್ಸಾಂ ರೈಫಲ್ಸ್‌ ಮತ್ತು ಮಿಜೊರಾಂ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ರೈಫಲ್‌ ಮತ್ತು ಕಾಟ್ರಿಡ್ಜ್‌ಗಳೊಂದಿಗೆ ಇಬ್ಬರು ಮ್ಯಾನ್ಮಾರ್‌ ಪ್ರಜೆಗಳನ್ನು ಬಂಧಿಸಲಾಗಿದೆ.

ಖಚಿತ ಮಾಹಿತಿ ಮೇರೆಗೆ ಜೊಕುಚುವಾ ಮತ್ತು ವಾರೆಂಗ್‌ ಗ್ರಾಮಗಳ ನಡುವೆ ಹರಿಯುವ ಸೆಕುಲ್ ನದಿಯಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳು, ಈ ಇಬ್ಬರನ್ನು ಬಂಧಿಸಿ, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಸ್ಸಾಂ ರೈಫಲ್ಸ್‌ ಹೇಳಿಕೆಯಲ್ಲಿ ತಿಳಿಸಿದೆ.

‘ಕಾರ್ಯಾಚರಣೆ ವೇಳೆ ಸೆಕುಲ್ ನದಿಯಲ್ಲಿ ಸಾಗುತ್ತಿದ್ದ ದೋಣಿಯನ್ನು ತಡೆದು ಪರಿಶೀಲನೆ ನಡೆಸಿದೆವು. ದೋಣಿಯಿಂದ ಇಬ್ಬರು ಮ್ಯಾನ್ಮಾರ್‌ ಪ್ರಜೆಗಳನ್ನು ಬಂಧಿಸಿ, ಅವರ ಬಳಿಯಿದ್ದ ಸ್ವಯಂಚಾಲಿತ ರೈಫಲ್ ಮತ್ತು 26 ಕಾಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಯಿತು‘ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.